Categories: ಬೀದರ್

ಬೀದರ್: ಮರಳು ಲಾರಿ ಮಾಲೀಕರಿಂದ ಲಂಚ ವಸೂಲಿ ಇಬ್ಬರು ಪೊಲೀಸ್‌ ಅಧಿಕಾರಿಗಳ ಸೆರೆ

ಬೀದರ್ : ಲಂಚ ಸ್ವೀಕರಿಸುತ್ತಿದ್ದಾಗ ಬಸವಕಲ್ಯಾಣ ತಾಲೂಕಿನ ಮಂಠಾಳದ ಪಿಎಸ್‍ಐ ಹಾಗೂ ಕಾನ್‌ಸ್ಟೆಬಲ್‌ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್​​ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾರೆ.  ಪಿಎಸ್‍ಐ ಶೀಲಾ ನ್ಯಾಮನ್ ಮತ್ತು ಕಾನ್ಸ್‌ಟೆಬಲ್‌ ಪರಶುರಾಮ ರೆಡ್ಡಿ ಬಂಧಿತರು.

ಇವರು ಮರಳು ಸಾಗಾಣಿಕೆ ಮಾಡಲು ಪ್ರತಿ ತಿಂಗಳು ಒಂದು ಲಾರಿಗೆ 7 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಒಟ್ಟು ಮೂರು ಲಾರಿಗಳಿಗೆ 21 ಸಾವಿರ ರೂ. ಬೇಡಿಕೆ ಇಟ್ಟಿದ್ದು ಕಲಬುರಗಿ ನಗರದ ಇರ್ಷಾದ್ ಪಟೇಲ್ ಎನ್ನುವವರು ನೀಡಿದ ದೂರಿನ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಂಠಾಳ ಠಾಣೆಯ ಮೇಲೆ ಬುಧವಾರ ಸಂಜೆ ದಾಳಿ ನಡೆಸಲಾಗಿತ್ತು. ಲೋಕಾಯುಕ್ತ ಎಸ್ಪಿ ಎ.ಆರ್.ಕರ್ನೂಲ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎನ್.ಎಂ.ಓಲೇಕಾರ್, ತನಿಖಾಧಿಕಾರಿಗಳಾದ ಬಾಬಾ ಸಾಹೇಬ್ ಪಾಟೀಲ್, ಪ್ರದೀಪ ಕೊಳ್ಳಾ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು.

ದೂರಿನ ವಿವರ: ಕಲಬುರಗಿ ಅಹ್ಮದ್ ನಗರದ ಇರ್ಷಾದ್ ಪಟೇಲ್ ಬುಧವಾರ ಬೀದರ್​ ಲೋಕಾಯುಕ್ತ ಪೊಲೀಸ್​ ಠಾಣೆಗೆ ಲಂಚದ ಬಗ್ಗೆ ದೂರು ನೀಡಿದ್ದರು. ಕಾನೂನು ಬದ್ಧವಾಗಿ ಪರವಾನಗಿ ಪಡೆದು ಮರಳು ಸಾಗಾಣಿಕೆ ವ್ಯಾಪಾರ ಮಾಡಿಕೊಂಡಿದ್ದೇನೆ. ಆದರೆ ಮರಳು ಸಾಗಾಣಿಕೆ ಮಾಡಲು ಬೀದರ್​ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಂಠಾಳ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ಪ್ರತಿ ಲಾರಿಗೆ ರೂಪಾಯಿ 7,000 ಯಂತೆ ಮೂರು ಲಾರಿಗೆ ಒಟ್ಟು 21,000 ರೂ. ಲಂಚದ ಹಣ ನೀಡಬೇಕೆಂದು ಪಿಎಸ್‌ಐ ಶೀಲಾ ನ್ಯಾಮನ್​, ಹಾಗು ಕಾನ್‌ಸ್ಟೆಬಲ್‌  ಪರಶುರಾಮರೆಡ್ಡಿ ಬೇಡಿಕೆ ಇಟ್ಟಿದ್ದರು ಎಂದು ತಿಳಿಸಿದ್ದಾರೆ.

 

Umesha HS

Recent Posts

ಇಂದು ದಾದಿಯರ ದಿನ; ದಣಿವರಿಯಿಲ್ಲದೆ ಕೆಲಸ ಮಾಡುವ ದಾದಿಯರಿಗೊಂದು ಸಲಾಂ

ಪ್ರಪಂಚದಾದ್ಯಂತ ಮೇ 12ರಂದು ಅಂತರಾಷ್ಟ್ರೀಯ ದಾದಿಯರ ದಿನ ವನ್ನಾಗಿ ಆಚರಿಸಲಾಗುತ್ತದೆ. ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದ ಗೌರವಾರ್ಥವಾಗಿ ವಿಶ್ವಾದ್ಯಂತ ಅಂತರರಾಷ್ಟ್ರೀಯ…

2 mins ago

ಜೈಲಿನಲ್ಲೇ ಹೃದಯಾಘಾತವಾಗಿ ಕೈದಿ ಮೃತ್ಯು

ವಿಚಾರಣಾಧೀನ ಕೈದಿಯೋರ್ವ ಜೈಲಿನಲ್ಲೇ ಹೃದಯಾಘಾತ ಸಂಭವಿಸಿ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಹಿರಿಯಡಕ ಸಬ್ ಜೈಲಿನಲ್ಲಿ ನಡೆದಿದೆ.

7 mins ago

ಎಕ್ಸಾಂನಲ್ಲಿ ಫೇಲ್‌ : ಕೆರೆಗೆ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

ಪರೀಕ್ಷೆಯಲ್ಲಿ ಫೇಲ್‌ ಆಗಿದ್ದೇನೆ ಎಂದು ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. . ಫೇಲ್ ಆದ ವಿಚಾರ ಪೋಷಕರಿಗೆ…

32 mins ago

29ನೇ ಬಾರಿ ಮೌಂಟ್‌ ಎವರೆಸ್ಟ್‌ ಏರಿದ ಕಮಿ ರೀಟಾ ಶೆರ್ಪಾ

ಎವರೆಸ್ಟ್ ಮ್ಯಾನ್ ಎಂದೇ ಹೆಸರಾಗಿರುವ ನೇಪಾಳದ ಕಮಿ ರೀಟಾ ಶೆರ್ಪಾ 29ನೇ ಬಾರಿ ವಿಶ್ವದ ಅತಿ ಎತ್ತರದ ಪರ್ವತ ಮೌಂಟ್‌…

41 mins ago

ಭೀಕರ ಅಪಘಾತ : ಇಬ್ಬರು ಶಿಕ್ಷಕರು ಸ್ಥಳದಲ್ಲೇ ದುರ್ಮರಣ

ಮದುವೆಗೆ ಹೋಗಿ ತಡರಾತ್ರಿ ಮರಳಿ ಬರುತ್ತಿದ್ದ ಸಂದರ್ಭ ಕಾರು ಪಲ್ಟಿಯಾಗಿ ಇಬ್ಬರು ಶಿಕ್ಷಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಪಾವಗಡ -ತುಮಕೂರು…

53 mins ago

ಕಡಬ: ಸಿಡಿಲು ಬಡಿದು ಮರಳುಗಾರಿಕೆ ಮಾಡುತ್ತಿದ್ದ ಕಾರ್ಮಿಕ ಸಾವು

ದಕ್ಷಿಣಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಮಳೆ ಆರಂಭವಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ದಕ್ಷಿಣಕನ್ನಡ ಜಿಲ್ಲೆಗೆ ವರುಣ ತಂಪೇರಗಿದ್ದಾನೆ. ಈ ನಡುವೆ ಸಿಡಿಲು…

1 hour ago