Categories: ಬೀದರ್

ವಿಧಿ ಇಲ್ಲದೇ ಕಾಂಗ್ರೆಸ್‌ ಸಚಿವರ ಕುಟುಂಬಸ್ಥರಿಗೆ ಟಿಕೆಟ್ ನೀಡಲಾಗುತ್ತಿದೆ : ಅಶೋಕ್‌

ಬೀದರ್ : ಜಿಲ್ಲೆಯ  ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಉಳಿದ ಎಲ್ಲಾ ಅಭ್ಯರ್ಥಿಗಳ ಟಿಕೆಟ್ ಘೋಷಣೆ ಮಾಡಲಿದ್ದೆವೆ,ಎಲ್ಲಾ 28 ಕ್ಷೇತ್ರಗಳಿಗೂ ಟಿಕೆಟ್ ಕ್ಲೀಯರ್ ಮಾಡುತ್ತೆವೆ ಎಂದಿದ್ದಾರೆ.

ಕಾಂಗ್ರೆಸ್ ನವರು ಹೇಳಿದರು ಪ್ರತಿ ಮೀಟಿಂಗ್ ಆದಾಗಲು 20 ಸಚಿವರು ಸ್ಪರ್ಧಿಸುತ್ತಾರೆ ಎಂದಿದ್ದರು,ಅಲ್ಲದೇ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಸಚಿವರು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದರು ಆದರೆ ಬರ್ತಾ ಬರ್ತಾ ಒಬ್ಬರು ಸಚಿವರು ಲೋಕಸಭೆ ಚುನಾವಣೆ ಸ್ಪರ್ಧಿಸಲು ಮುಂದೆ ಬಂದಿಲ್ಲಾ. ಈಗ ವಿಧಿ ಇಲ್ಲದೇ ಗತಿ ಇಲ್ಲದೇ ಕಾಂಗ್ರೆಸ್ನ ಪಾರ್ಥಮಿಕ ಸದಸ್ಯತ್ವ ಪಡೆದೇ ಇರೋರಿಗೆ ಟಿಕೆಟ್ ನೀಡಲಾಗಿದೆ ಎಂದು ಟೀಕಿಸಿದರು.

ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಕ್ಕಳು, ಹೆಂಡತಿ, ಅಣ್ಣ ತಮ್ಮಂದಿರಿಗು, ಸೊಸೆಯರನ್ನು ಈಗ ಬೀದಿಗೆ ತಂದಿದ್ದಾರೆ.ಕಾಂಗ್ರೆಸ್ನ ಯೋಗ್ಯತೆಗೆ ಯಾರೂ ಕಾರ್ಯಕರ್ತರು ಸಿಗಲಿಲ್ಲವಾ?..
ಕಾಂಗ್ರೆಸ್ನವರೇ ಹೇಳುತ್ತಿದ್ದಾರೆ ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಹುಡುಕಿ ಕೊಡುತ್ತಿದ್ದಾರೆ.
ನಿಮ್ಮಲ್ಲಿ ವಿಧಿ ಇಲ್ಲದೇ ಸಚಿವರ ಕುಟುಂಬಸ್ಥರಿಗೆ ಟಿಕೆಟ್ ನೀಡಲಾಗುತ್ತಿದೆ,ಈ ಬಾರಿ ನರೇಂದ್ರ ಮೋದಿ ಅವರು 400 ಸೀಟ್ಗಳ ಟಾರ್ಗೆಟ್ ಕೊಟ್ಟಿದಾರೆ,400 ಸೀಟುಗಳ ಗುರಿ ಕೂಡ ನಾವು ಮುಟ್ಟುತ್ತೆವೆ ಎಂದು ಹೇಳಿದರು.

ಕಳೆದ ಬಾರಿ ವಿರೋಧ ಪಕ್ಷದ ನಾಯಕ ಆಗಲು ಕಾಂಗ್ರೆಸ್ಗೆ ಯೋಗ್ಯತೆ ಇರಲಿಲ್ಲಾ,ಈ ಬಾರಿ ಅದಕ್ಕಿಂತ ದಯನೀಯ ಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ಬರಲಿದೆ,ನಾವು ಆಟ ಆಡುವುದಕ್ಕೂ ಮುನ್ನ ನಮ್ಮ ಕ್ಯಾಪ್ಟನ್ ನರೇಂದ್ರ ಮೋದಿ ಅಂತ ಹೇಳಿದ್ದೆವೆ.ಅವರ ಬಳಿ ಕ್ಯಾಪ್ಟನ್ ಯಾರೂ ಅಂತನೇ ಗೊತ್ತಾಗುತ್ತಿಲ್ಲಾ ಎಂದು ಟೀಕಿಸಿ ಮಾತನಾಡಿದರು.ಮೊನ್ನೆ ನಡೆದ ಚುನಾವಣೆಯಲ್ಲಿ ಸೆಮಿ ಫೈನಲ್ ಮ್ಯಾಚ್ ನಾವು ಗೆದಿದ್ದೆವೆ, ಫೈನಲ್ ಕೂಡ ಗೆಲ್ಲುತ್ತೆವೆ ಎಂದು ಸಂಪೂರ್ಣ ಭರವಸಯಿಂದ ಹೇಳಿದರು.

Nisarga K

Recent Posts

ಪಾಪನಕೆರೆ ಒತ್ತುವರಿ ಆರೋಪ : ತಾಲೂಕು ಕಚೇರಿ ಮುಂದೆ ಪ್ರತಿಭಟನೆ

ಭೀಮನಗರದ ರೈತರು ಯುವ ಮುಖಂಡ ಕೃಷ್ಣಕುಮಾರ್ ನೇತೃತ್ವದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

13 mins ago

ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ: ಆರೋಪಿ ಬಿಭವ್‌ ಕುಮಾರ್‌ ವಶಕ್ಕೆ

ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ನಡೆಸಿದ ಆರೋಪಿ, ಅರವಿಂದ್‌ ಕೇಜ್ರಿವಾಲ್‌ ಆಪ್ತ ಕಾರ್ಯದರ್ಶಿ…

40 mins ago

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹುಸಿ ಬಾಂಬ್ ಬೆದರಿಕೆ: ಪ್ರಯಾಣಿಕನ ಮೇಲೆ ಪ್ರಕರಣ ದಾಖಲು

ಬೆಂಗಳೂರಿನಿಂದ ಪುಣೆಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಚೆಕ್-ಇನ್ ಬ್ಯಾಗ್‌ನಲ್ಲಿ ಬಾಂಬ್ ಅಡಗಿಸಿಟ್ಟಿರುವುದಾಗಿ ಸುಳ್ಳು ಬೆದರಿಕೆ ಹಾಕಿ ಭೀತಿ…

49 mins ago

ಸಂವಿಧಾನವನ್ನು ಯಾವುದೇ ಸರ್ಕಾರ ಬದಲಾಯಿಸಲು ಸಾಧ್ಯವಿಲ್ಲ : ನಿತಿನ್‌ ಗಡ್ಕರಿ

ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸಲಿದೆ ಎನ್ನುವ ಕಾಂಗ್ರೆಸ್‌ ಆರೋಪಕ್ಕೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಖಾತೆ ಸಚಿವ…

1 hour ago

ತೀರ್ಥಯಾತ್ರೆಗೆ ಬಂದ ನಾಲ್ವರು ನದಿಯಲ್ಲಿ ಮುಳುಗಿ ದಾರುಣ ಸಾವು

ತೀರ್ಥಯಾತ್ರೆಗೆಂದು ಅತಿಥಿ ಗೃಹಕ್ಕೆ ಬಂದಿದ್ದವರು ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಲ್ಲಾಪುರದ ಕಾಗಲ್ ತಾಲೂಕಿನ…

1 hour ago

ಪ್ರಾಚೀನರ ಕಲಾ ಕೊಡುಗೆಗಳ ಸಂರಕ್ಷಣೆ ಅಗತ್ಯ: ನೇಮಿರಾಜ ಶೆಟ್ಟಿ

ಇತಿಹಾಸವನ್ನು ಚಿತ್ರಗಳ ಮೂಲಕ ಜೋಪಾಸನೆ ಮಾಡುವ ಕಾಯಕವೂ ಅತ್ಯಂತ ಶ್ರೇಷ್ಠ. ಮುಂದಿನ ಪೀಳಿಗೆಗೆ ಪ್ರಾಚೀನರ ಕಲಾ ಕೊಡುಗೆಯನ್ನು ಸಂರಕ್ಷಣೆ ಮಾಡುವುದು…

1 hour ago