Categories: ಬೀದರ್

ಎರಡು ದಿನಗಳಲ್ಲಿ ಹುಮನಾಬಾದ್‌ ರಿಸರ್ವೇಶನ್‌ ಕೌಂಟರ್‌ ಆರಂಭ: ಖೂಬಾ

ಬೀದರ್: ದಸರಾ ಹಬ್ಬದ ಅಂಗವಾಗಿ ವಾಯಾ ಕಲಬುರಗಿ ಮೂಲಕ ಬೀದರ್‌-ಬೆಂಗಳೂರು ನಡುವೆ ಮೂರು ವಿಶೇಷ ರೈಲುಗಳಿಗೆ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

ಅ. 20ರಂದು (ಶುಕ್ರವಾರ) ಗಾಡಿ ಸಂಖ್ಯೆ 06521 ರೈಲು ಯಶವಂತಪುರದಿಂದ ಬೀದರ್‌, ಮರುದಿನ ಅ. 21ರಂದು (ಶನಿವಾರ) ಗಾಡಿ ಸಂಖ್ಯೆ 06522 ಬೀದರ್‌ನಿಂದ ಯಶವಂತಪುರಕ್ಕೆ ಹೊರಡಲಿದೆ ಎಂದು ಬುಧವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅ. 21ರಂದು ಗಾಡಿ ಸಂಖ್ಯೆ 06523 ಯಶವಂತಪುರದಿಂದ ಬೀದರ್‌, ಮರುದಿನ (ಅ.22) ಗಾಡಿ ಸಂಖ್ಯೆ 06524 ಬೀದರ್‌ನಿಂದ ಯಶವಂತಪುರಕ್ಕೆ ಚಲಿಸಲಿದೆ. ಅ. 23ರಂದು ಗಾಡಿ ಸಂಖ್ಯೆ 06505 ಯಲಹಂಕದಿಂದ ಬೀದರ್‌ ಕಡೆಗೆ, ಮರುದಿನ (ಅ.24) ಗಾಡಿ ಸಂಖ್ಯೆ 06506 ಬೀದರ್‌ನಿಂದ ಯಶವಂತಪುರಕ್ಕೆ ಪಯಣ ಬೆಳೆಸಲಿದೆ.

ಯಶವಂತಪುರ-ಬೀದರ್‌ ನಡುವೆ ಸಂಚರಿಸುವ ಎರಡು ರೈಲುಗಳು ರಾತ್ರಿ 11.15ಕ್ಕೆ ಯಶವಂತಪುರದಿಂದ ಹೊರಟು ಕಲಬುರಗಿ, ಕಮಲಾಪುರ, ಹುಮನಾಬಾದ್‌ ಮಾರ್ಗವಾಗಿ ಮರುದಿನ ಮಧ್ಯಾಹ್ನ 12.15ಕ್ಕೆ ಬೀದರ್‌ ತಲುಪಲಿವೆ. ಈ ರೈಲುಗಳು ಮಧ್ಯಾಹ್ನ 2.30ಕ್ಕೆ ಬೀದರ್‌ನಿಂದ ಹೊರಟು ಬಂದ ಮಾರ್ಗದಿಂದ ಮರುದಿನ ನಸುಕಿನ ಜಾವ 4 ಗಂಟೆ ಯಶವಂತಪುರ ಸೇರಲಿವೆ. ಇನ್ನೊಂದು ರೈಲು ರಾತ್ರಿ 11.15ಕ್ಕೆ ಯಲಹಂಕದಿಂದ ಹೊರಟು ಮರುದಿನ ಮಧ್ಯಾಹ್ನ 12.15ಕ್ಕೆ ಬೀದರ್‌ ತಲುಪಲಿದೆ. ಮಧ್ಯಾಹ್ನ 2.30ಕ್ಕೆ ಬೀದರ್‌ನಿಂದ ಹೊರಟು ಮರುದಿನ ಬೆಳಗಿನ ಜಾವ 4ಕ್ಕೆ ಯಲಹಂಕ ತಲುಪಲಿದೆ ಎಂದು ತಿಳಿಸಿದ್ದಾರೆ.

‘ಈ ಹಿಂದೆ ಬಂದ್‌ ಆಗಿದ್ದ ಹುಮನಾಬಾದ್‌ ರಿಸರ್ವೇಶನ್‌ ಟಿಕೆಟ್‌ ಕೌಂಟರ್‌ ಎರಡು ದಿನಗಳಲ್ಲಿ ಪುನಃ ಆರಂಭಿವಾಗಲಿದೆ. ಇದರೊಂದಿಗೆ ಕಮಲಾಪುರದಲ್ಲೂ ಹೊಸದಾಗಿ ರಿಸರ್ವೇಶನ್‌ ಕೌಂಟರ್‌ ಆರಂಭಿಸಲಾಗುವುದು. ಸಾರ್ವಜನಿಕರ ಅನುಕೂಲಕ್ಕಾಗಿ ಹಬ್ಬಕ್ಕೆ ಮೂರು ವಿಶೇಷ ರೈಲುಗಳನ್ನು ನೀಡಿರುವ ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಧನ್ಯವಾದ ತಿಳಿಸುತ್ತೇನೆ’ ಎಂದಿದ್ದಾರೆ.

Ashika S

Recent Posts

ಜಿಂದಾಲ್‌ನ ಎಚ್ಎಸ್ಎಂ ಪ್ಲಾಂಟ್‌ನಲ್ಲಿ ನೀರಿನ ಟ್ಯಾಂಕ್‌ಗೆ ಬಿದ್ದು 3 ಎಂಜಿನಿಯರ್‌ಗಳು ಮೃತ್ಯು

ನೀರಿನ ಟ್ಯಾಂಕ್‌ನಲ್ಲಿ ಬಿದ್ದು ಮೂವರು ಎಂಜಿನಿಯರ್‌ಗಳು ಸಾವಿಗೀಡಾದ ಘಟನೆ ಬಳ್ಳಾರಿ ಜಿಲ್ಲೆಯ ಜಿಂದಾಲ್‌ನ ಎಚ್ಎಸ್ಎಂ ಪ್ಲಾಂಟ್‌ನಲ್ಲಿ ನಡೆದಿದೆ.

16 mins ago

ವಿದ್ಯುತ್ ಹೈಟೆನ್ಷನ್ ವೈರ್ ತಾಗಿ ವ್ಯಕ್ತಿ ಮೃತ್ಯು

ವಿದ್ಯುತ್ ಹೈಟೆನ್ಷನ್ ವೈರ್ ತಾಕಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಚಿಕ್ಕೆನಕೊಪ್ಪ ಗ್ರಾಮದಲ್ಲಿ ನಡೆದಿದೆ.

29 mins ago

ಅದೃಷ್ಟ ನಮ್ಮ ಕೈ ಹಿಡಿಯಬೇಕಿದೆ: ಆರ್​ಸಿಬಿ ನಾಯಕ ಫಾಫ್​ ಡು ಪ್ಲೆಸಿಸ್​

ಕ್ರಿಕೆಟ್​ ಅಸೋಸಿಯೇಷನ್​ ಮೈದಾನದಲ್ಲಿ ನಡೆದ 17ನೇ ಆವೃತ್ತಿಯ 58ನೇ ಐಪಿಎಲ್​ ಪಂದ್ಯದಲ್ಲಿ ಅಲ್ರೌಂಡ್​ ಪ್ರದರ್ಶನದ ಫಲವಾಗಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು…

44 mins ago

“ಜೈಶ್ರೀರಾಮ್” ಹಾಡಿನಿಂದ ಕಾಲೇಜಿನಲ್ಲಿ ಧರ್ಮದಂಗಲ್: ಸಂಸದ ಪ್ರತಾಪ್​ ಸಿಂಹ ಖಂಡನೆ

ಧರ್ಮ ದಂಗಲ್​ ಕಿಡಿ ಮೈಸೂರಿನಲ್ಲಿ ಹೊತ್ತಿಕೊಂಡಿದ್ದು, ಮೈಸೂರಿನ ಸಂತ ಫಿಲೋಮಿನಾಸ್ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹಾಡಿದ ಜಯತು ಜಯತು ಜೈ…

1 hour ago

ಭಾರತದಲ್ಲಿ ಹಿಂದುಗಳ ಸಂಖ್ಯೆ ಇಳಿಕೆ, ಮುಸ್ಲಿಮರ ಸಂಖ್ಯೆ ಏರಿಕೆ: ಆರ್ಥಿಕ ಸಲಹಾ ಮಂಡಳಿ

ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳ ಜನಸಂಖ್ಯೆ ಕುಸಿತವಾಗುತ್ತಿದ್ದು ಇದೇ ವೇಳೆ ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿದೆ ಎಂದು ಪ್ರಧಾನ ಮಂತ್ರಿ ಆರ್ಥಿಕ ಸಲಹಾ…

1 hour ago

ಪಟಾಕಿ ತಯಾರಿಕಾ ಕಾರ್ಖಾನೆ ಸ್ಫೋಟ: 8 ಮಂದಿ ಮೃತ್ಯು

ಕಾರ್ಖಾನೆಯೊಂದರಲ್ಲಿ ಪಟಾಕಿ ಸಿಡಿದು 8 ಜನರು ಸಾವನ್ನಪ್ಪಿದ ಘಟನೆ ತಮಿಳುನಾಡಿನ ಶಿವಕಾಶಿಯಲ್ಲಿ ನಡೆದಿದೆ.

2 hours ago