Categories: ಬೀದರ್

ಬೀದರ್‌ನಲ್ಲಿ ಭುಗಿಲೆದ್ದ ಅಸಮಾಧಾನ; ಸೂರ್ಯಕಾಂತ ಬಂಡಾಯ ಸಾಧ್ಯತೆ

ಬೀದರ್: ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ಮೊದಲ ಹಂತದ ಪಟ್ಟಿ ಪ್ರಕಟಿಸಿದ ಸಂದರ್ಭದಲ್ಲಿ ಯಾವುದೇ ಅಪಸ್ವರ ಕೇಳಿ ಬರಲಿಲ್ಲ. ಆದರೆ, ಎರಡನೇ ಪಟ್ಟಿ ಪ್ರಕಟಿಸಿದ ಬೆನ್ನಲ್ಲೇ ಬೀದರ್‌ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಭುಗಿಲೆದ್ದಿದೆ.

ಎರಡನೇ ಪಟ್ಟಿಯಲ್ಲಿ ಸೂರ್ಯಕಾಂತ ನಾಗಮಾರಪಳ್ಳಿ ಅವರ ಹೆಸರು ಇಲ್ಲದ್ದನ್ನು ಕಂಡ ಅಭಿಮಾನಿಗಳು ಮಧ್ಯ ರಾತ್ರಿಯೇ ಸಾವಿರಾರು ಸಂಖ್ಯೆಯಲ್ಲಿ ಮಾಧವನಗರದ ಸೂರ್ಯಕಾಂತ ಅವರ ನಿವಾಸದ ಎದುರು ಜಮಾವಣೆಗೊಂಡು ಪಕ್ಷದ ವರಿಷ್ಠರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಿಂದಿನ ಚುನಾವಣೆಯಲ್ಲೂ ಕೆಲ ಬಿಜೆಪಿ ಮುಖಂಡರೇ ಸೂರ್ಯಕಾಂತ ಗೆಲ್ಲದಂತೆ ನೋಡಿಕೊಂಡಿದ್ದರು. ಜಿಲ್ಲೆಯ ಹಿರಿಯ ಮುಖಂಡರೇ ಉದ್ದೇಶ ಪೂರ್ವಕವಾಗಿ ಟಿಕೆಟ್‌ ತಪ್ಪಿಸಿದ್ದಾರೆ. ನಾಗಮಾರಪಳ್ಳಿ ಕುಟುಂಬ ರಾಜಕೀಯವಾಗಿ ಬೆಳೆದರೆ ನಾವು ಮುಂದೆ ಬರುವುದು ಕಷ್ಟ ಎಂದು ದುಷ್ಟ ಶಕ್ತಿಗಳು ಸಂಘಟಿತವಾಗಿ ನಾಗಮಾರಪಳ್ಳಿ ಕುಟುಂಬ ವಿರೋಧಿ ಕೆಲಸ ಮಾಡಿವೆ ಎಂದು ಸೂರ್ಯಕಾಂತ ಬೆಂಬಲಿಗರು ಆಕ್ರೋಶ ಹೊರ ಹಾಕಿದರು.

‘ನಾನು ಯಾರಿಗೂ ಕೆಟ್ಟದ್ದು ಮಾಡಿಲ್ಲ. ನನಗೆ ಕೇಡು ಬಯಸಿದವರಿಗೂ ಒಳ್ಳೆಯದಾಗಲಿ ಎಂದೇ ಹಾರೈಸುವೆ. ಮುಖಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಪಕ್ಷದ ವರಿಷ್ಠರು ಕೊನೆಯ ಕ್ಷಣದ ವರೆಗೂ ನಿನಗೆ ಬೀದರ್‌ ಟಿಕೆಟ್‌ ದೊರೆಯಲಿದೆ ಎಂದು ಭರವಸೆ ಮೂಡಿಸಿದ್ದರು. ಇದೀಗ ಮೋಸ ಮಾಡಿದ್ದಾರೆ’ ಎಂದು ಬಿಜೆಪಿ ಟಿಕೆಟ್‌ ಆಕಾಂಕ್ಷಿ ಸೂರ್ಯಕಾಂತ ನಾಗಮಾರಪಳ್ಳಿ ಪ್ರತಿಕ್ರಿಯಿಸಿದರು.

Gayathri SG

Recent Posts

ಮಸೀದಿಯೊಳಗೆ ಅರೆನಗ್ನ ಸ್ಥಿತಿಯಲ್ಲಿ ಮಹಿಳೆಯ ಡೆಡ್‌ಬಾಡಿ ಪತ್ತೆ

ತಾಜ್‌ಮಹಲ್‌ ಸಮೀಪದ ಮಸೀದಿವೊಂದರಲ್ಲಿ ಘೋರ ಕೃತ್ಯ ನಡೆದಿದ್ದು ಅರೆನಗ್ನ ಸ್ಥಿತಿಯಲ್ಲಿ 22 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ಈ ಘಟನೆ…

10 mins ago

ಮಾಜಿ ಸಂಸದ ಎಲ್​ ಆರ್ ಶಿವರಾಮೇಗೌಡ ಮನೆ ಮೇಲೆ ಮೊಟ್ಟೆ ದಾಳಿ

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌ ಸಂಬಂಧಿಸಿದಂತೆ ಎಚ್‌ ಡಿ ದೇವೆಗೌಡ ಅವರ ವಿರುದ್ದ ಆಡಿಯೋ ಒಂದರಲ್ಲಿ ಅವಹೇಳನವಾಗಿ ನಿಂಧಿಸಿದ ಮಾಜಿ…

36 mins ago

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮೃತ್ಯು; ಪ್ರಧಾನಿ ಮೋದಿ ಸಂತಾಪ

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಪ್ರಯಾಣಿಸುತ್ತಿದ್ದ ಬೆಂಗಾವಲು ಪಡೆ ಹೆಲಿಕಾಪ್ಟರ್‌ಗಳ ಪೈಕಿ ಒಂದು ಪತನಗೊಂಡಿದ್ದು, ಅಪಘಾತದಲ್ಲಿ ಇರಾನ್‌ ಅಧ್ಯಕ್ಷ…

45 mins ago

‘ರೇವ್ ಪಾರ್ಟಿ’ ಮೇಲೆ ಸಿಸಿಬಿ ದಾಳಿ; ನಟಿ ಹೇಮಾ ಸೇರಿ ಐವರು ಅರೆಸ್ಟ್

ಆರ್ ಫಾರ್ಮ್ ಹೌಸ್ ನಲ್ಲಿ ರೇವ್​ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಪಾರ್ಟಿ ಆಯೋಜಕ ವಾಸು,…

1 hour ago

ಆನೆಯ ಕೂಡುದಂತಕ್ಕೆ ಕತ್ತರಿ ಪ್ರಯೋಗ ಸಕ್ಸಸ್

ಬಂಡೀಪುರದಲ್ಲಿ ಸೆರೆಹಿಡಿಯಲಾಗಿದ್ದ ಆನೆಯ ಕೂಡುದಂತಕ್ಕೆ ಕತ್ತರಿ ಪ್ರಯೋಗ ಮಾಡಿರುವುದು ಸಕ್ಷಸ್ ಆಗಿದೆ. ಕೂಡು ದಂತದಿಂದ ಆಹಾರ ಸೇವಿಸಲಾಗದೆ ಪರದಾಡುತ್ತಿದ್ದ ಆನೆ…

1 hour ago

ಮತಗಟ್ಟೆ ದ್ವಂಸ ಪ್ರಕರಣ : ಬಿಡುಗಡೆಗೊಂಡ ಗ್ರಾಮಸ್ಥರಿಗೆ ಎನ್. ಮಹೇಶ್ ಸಾಂತ್ವಾನ

ಏಪ್ರಿಲ್ 26 ರಂದು ನಡೆದ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ…

1 hour ago