News Karnataka Kannada
Sunday, April 21 2024
Cricket
ಬೀದರ್

ಬೀದರ್: 1.88 ಲಕ್ಷ ರೂ. ಮೌಲ್ಯದ ನಕಲಿ ರಸಗೊಬ್ಬರ ಜಪ್ತಿ ಮಾಡಿದ ಕೃಷಿ ಅಧಿಕಾರಿಗಳು

Tomatoes worth lakhs of rupees stolen: Farmer
Photo Credit : News Kannada

ಬೀದರ್: ಗಡಿ ಬೀದರ್ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಚುರುಕುಗೊಳ್ಳುತ್ತಿರುವ ಸಂದರ್ಭದಲ್ಲಿಯೇ ಹುಮನಾಬಾದ ಪಟ್ಟಣದ ಹೊರವಲಯದ ಕೈಗಾರಿಕಾ ಪ್ರದೇಶದ ಗೋದಾಮಿನಲ್ಲಿ 1.88 ಲಕ್ಷ ರೂಪಾಯಿ ಮೌಲ್ಯದ ನಕಲಿ ರಸಗೊಬ್ಬರ ಪತ್ತೆಯಾಗಿದೆ.

ಮಹಾರಾಷ್ಟ್ರ ಮೂಲದ ವ್ಯಕ್ತಿಯೊಬ್ಬ ಇಲ್ಲಿನ ಸ್ಥಳೀಯರ ಜೊತೆಗೂಡಿ ಕೈಗಾರಿಕಾ ಪ್ರದೇಶದಲ್ಲಿನ ಗೋದಾಮು ಬಾಡಿಗೆಗೆ ಪಡೆದುಕೊಂಡು ಅಕ್ರಮ ಧಂದೆ ನಡೆಸಿದ್ದಾರೆ ಎನ್ನಲಾಗಿದೆ.

ಪೊಲೀಸ್ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಚರಣೆಯಲ್ಲಿ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರದ ಸಾಂಗಲಿ ಹಾಗೂ ಕಲಬುರಗಿಯಿಂದ ಕಚ್ಚಾ ವಸ್ತು ತಂದು ಕಲಬರಕೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ರಾಯಚೂರಿನಿಂದ ಎಂಎಫ್‌ಸಿ ಕಂಪನಿಯ ಹೆಸರಿನಲ್ಲಿನ ಮುದ್ರಿಸಿದ ನಕಲಿ ಬ್ಯಾಗ್ ಗಳಲ್ಲಿ ನಕಲಿ ರಸಗೊಬ್ಬರ ಭರ್ತಿಮಾಡಿ ಸಾಗಾಟ ಮಾಡಲಾಗುತ್ತಿದೆ ಎಂದು ಕೃಷಿ ಅಧಿಕಾರಿ ಗೌತಮ ಮಾಹಿತಿ ನೀಡಿದ್ದಾರೆ.

ರೈತರು ಬಿತ್ತನೆ ಮಾಡುವ ಸಮಯವನ್ನೇ ಬಂಡವಾಳ ಮಾಡಿಕೊಂಡು ರೈತರಿಗೆ ಮೋಸ ಮಾಡಿ ಹಣ ಸಂಪಾದನೆ ಮಾಡುವ ಉದ್ದೇಶ ಹೊಂದಿದ್ದಾರೆ. ಗೋದಾಮಿನಲ್ಲಿ ಬಿಳಿ ಬಣ್ಣದ ಹಾಗೂ ಕಪ್ಪು ಬಣ್ಣದ ರಸಗೊಬ್ಬರ ಪತ್ತೆಯಾಗಿದೆ.

ಬಿಳಿಬಣ್ಣದ ರಸಗೊಬ್ಬರ 236 ಬ್ಯಾಗ್ ಇದರ ಅಂದಾಜು ಮೊತ್ತ 87,500 ಹಾಗೂ 126 ಕಪ್ಪುಬಣ್ಣದ ರಸಗೊಬ್ಬರ ಬ್ಯಾಗ್ ಪತ್ತೆಯಗಿದ್ದು, ಅಂದಾಜು 1,00,800 ಆಗಿದೆ. ಒಟ್ಟಾರೆ 1.88 ಲಕ್ಷ ಮೌಲ್ಯದ ನಕಲಿ ಬ್ರಾಂಡ್ ಡಿಎಪಿ ರಸಗೊಬ್ಬರ ಪತ್ತೆಯಾಗಿದೆ.

ಗೋದಾಮಿನಲ್ಲಿ ಪತ್ತೆಯಾಗಿರುವ ನಕಲಿ ರಸಗೊಬ್ಬರ ಎಂದು ಬೀದರ್ ಜಿಲ್ಲೆಯ ‌ಕೃಷಿ ಜಂಟಿ ನಿರ್ದೇಶಕರು ಮಾಹಿತಿ ನೀಡಿದರು. ಹುಮನಾಬಾದ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು