ಬೀದರ: ಜೇಸ್ಕಾಂ ಬೀದರ ಉಪ-ವಿಭಾಗದಲ್ಲಿನ 110ಕೆವಿ ಹಬ್ಸಿಕೋಟಾ ಉಪಕೇಂದ್ರದಿಂದ ಹೋಗುವ 11ಕೆವಿ ದರ್ಗಾಪೂರ ಫೀಡರದ ಮೇಲೆ ಬರುವ ಗೋಲೆಖಾನ ದುಲ್ಹನದರ್ವಾಜ, ಗವಾನ ಚೌಕ, ಮನಿಯಾರತಲೀಮ, ಭೀಮ ನಗರ, ಮುಲ್ತಾನಿ ಪಾಷಾ ದರ್ಗಾ, ಗವಾನ ಚೌಕ, ಜಿಲ್ಲಾ ಪಂಚಾಯತ ಕಛೇರಿ, ಎಸಿ ಹೌಸ, ಡಿಸಿ ಹೌಸ ಹಾಗೂ ಸುತ್ತಮುತ್ತಲಿನ ಪ್ರದೇಶದ ಈ ಫೀಡರನ ಮೇಲೆ ತುರ್ತು ನಿರ್ವಹಣೆ ಕೆಲಸ ಇರುವುದರಿಂದ ಜೂನ್ 3 ರಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.
ಪ್ರಯುಕ್ತ ಗ್ರಾಹಕರು ಸಹಕರಿಸಬೇಕೆಂದು ಬೀದರ ಉಪ-ವಿಭಾಗದಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.