ಬೀದರ್: ಟ್ರಾಫಿಕ್ ನಿಯಮಗಳ ಕುರಿತು ಅರಿವು ಮೂಡಿಸಲು ಬೀದರ್ ಪೊಲೀಸ್ ಇಲಾಖೆಯಿಂದ ರನ್ ಫಾರ್ ಸೇಫ್ಟಿ ಅಭಿಯಾನ ನಾಳೆ ನಡೆಯಲಿದೆ.
ನಗರದ ಕೋಟೆ ಆವರಣದಿಂದ ಪ್ರಾರಂಭವಾಗಲಿರುವ ಓಟ ಸಿದ್ದಾರ್ಥ ಕಾಲೇಜ್, ಮಡಿವಾಳ ವೃತ್ತ, ಹೊಸ ಬಸ್ ನಿಲ್ದಾಣ, ಕ್ಲಾಸಿಕ ದಾಬಾ, ಹೆಣ್ಣು ಮಗು ವೃತ್ತ, ಕೆಇಬಿ ಕಚೇರಿ, ಗುದುಗೆ ಆಸ್ಪತ್ರೆ, ಹರಳಯ್ಯಾ ವೃತ್ತ, ಶಿವಾಜಿ ವೃತ್ತ, ಅಂಬೇಡ್ಕರ್ ವೃತ್ತ, ಮಹಾವೀರ ವೃತ್ತ, ಬಸವೇಶ್ವರ ವೃತ್ತ, ಚೌಬಾರ, ಗವಾನ ಚೌಕ್ ಮೂಲಕ ವಾಪಸ ಕೋಟೆಗೆ ಬಂದು ತಲುಪಲಿದೆ.
2.5 ಕಿಮಿ, 5 ಕಿಮಿ ಮತ್ತು 10 ಕಿಮಿಗಳ ಓಟ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಆ.27 ರಂದು ಬೆಳಿಗ್ಗೆ 6 ಗಂಟೆಯಿಂದ 9 ಗಂಟೆವರೆಗೆ ಮ್ಯಾರಥಾನ್ ಕಾರ್ಯಕ್ರಮ ನಡೆಯಲಿದೆ.
ಈ ಮ್ಯಾರಥಾನ್ದಲ್ಲಿ ಸುಮಾರು 5000 ಜನರು ಭಾಗವಹಿಸುವ ಸಂಭವ ಇರುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಮಾಹಿತಿ ನೀಡಿದ್ದಾರೆ.