News Karnataka Kannada
Monday, April 29 2024
ಬೀದರ್

ಬೀದರ್: ರವಿಯೊಂದಿಗೆ ಸಚಿವ ಸೋಮಶೇಖರ್ ಇರುವ ವಿಡಿಯೊ ಬಿಡುಗಡೆ ಮಾಡಿದ ಎಚ್‌ಡಿಕೆ

: HDK releases video of Minister Somashekar with Ravi
Photo Credit : By Author

ಬೀದರ್: ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಸಹಕಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರ ವಿರುದ್ಧ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ ಹೊರಹಾಕಿ, ಸ್ಯಾಂಟ್ರೋ ರವಿ ಜತೆ ಸಚಿವ ಸೋಮಶೇಖರ್‌ ಇರುವ ವಿಡಿಯೊವನ್ನು  ಬಿಡುಗಡೆ ಮಾಡಿದ್ದಾರೆ.

ಮೈತ್ರಿ ಸರ್ಕಾರ ಕೆಡವಲು ಬಾಂಬೆಗೆ ಹೋಗಿದ್ದ 17 ಶಾಸಕರ ಬಗ್ಗೆ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ ಸಚಿವ ಸೋಮಶೇಖರ್‌, ಕುಣಿಯಲಾರದ ಸೂ… ನೆಲ ಡೊಂಕ ಎಂದಳಂತೆ ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಚಾಂಗಲೇರಾ ಗ್ರಾಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ, ಅಸಮಾಧಾನ ವ್ಯಕ್ತಪಡಿಸಿ ವಿಡಿಯೊ ಬಿಡುಗಡೆ ಮಾಡಿದ್ದಾರೆ.

ಕಳ್ಳನ ಮನಸ್ಸು ಹುಳ್ಳ ಹುಳ್ಳಗೆ ಎಂದರೆ ಇವರಿಗ್ಯಾಕೆ ನೊವು?? ನಾನು ದುಡ್ಡಿನ‌ ದಂಧೆ ಬಗ್ಗೆ ಮಾತನಾಡಿದ್ದೇನೆ. ಬಾಂಬೆಗೆ ಯಾರು ಯಾರನ್ನು ಕರೆದುಕೊಂಡು ಹೋಗಿದ್ದರು ಎಂದು ನಾನು ಹೇಳಿದ್ದೇನೆ. ನನ್ನ ಕೆಣಕ್ಕಿದ್ದಕ್ಕೆ ಈ ವಿಡಿಯೋ ಬಿಟ್ಟಿರುವೆ, ನನ್ನ ತಂಟೆಗೆ ಬರಬೇಡಿ. ಈ ವಿಡಿಯೋ ಎಲ್ಲಾ ಕಡೆಗೆ ವೈರಲ್ ಆಗಿದೆ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು