News Karnataka Kannada
Tuesday, April 30 2024
ಬೀದರ್

ಬೀದರ್: ಗುಡಪಳ್ಳಿಗೆ ಎರಡನೇ ಬಾರಿ ‘ಗಾಂಧಿ ಗ್ರಾಮ’ ಪುರಸ್ಕಾರ

Bidar: Gudapalli gets 'Gandhi Grama' award for the second time
Photo Credit : News Kannada

ಔರಾದ್: ತಾಲ್ಲೂಕಿನ ಗುಡಪಳ್ಳಿ ಗ್ರಾಮ ಪಂಚಾಯಿತಿ ಎಂಟು ವರ್ಷಗಳಲ್ಲಿ 2ನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ.

ಮೊದಲು ಜೋಜನಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ಗುಡಪಳ್ಳಿ ಗ್ರಾಮ 2015ರಲ್ಲಿ ಪ್ರತ್ಯೇಕ ಗ್ರಾಮ ಪಂಚಾಯಿತಿಯಾಗಿ ಅಸ್ತಿತ್ವಕ್ಕೆ ಬಂತು. ಹೊಸ ಪಂಚಾಯಿತಿ ಆದರೂ ಅಭಿವೃದ್ಧಿಯಲ್ಲಿ ಜಿಲ್ಲೆಗೆ ಮಾದರಿ ಎನಿಸಿದೆ. ಅಂದಿನ ಪಿಡಿಒ ಶಿವಾನಂದ ಔರಾದೆ ಅವರ ಅಭಿವೃದ್ಧಿ ಪರ ನಿಲುವಿನಿಂದ 2018-19ನೇ ಸಾಲಿನಲ್ಲಿಯೇ ಈ ಪಂಚಾಯಿತಿ ಗಾಂಧಿ ಗ್ರಾಮ ಪುರಸ್ಕಾರ ಪಡೆದು ಹೆಸರು ಮಾಡಿತ್ತು.

ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಗುಡಪಳ್ಳಿ, ಮೆಡಪಳ್ಳಿ, ಉಜನಿ ಹಾಗೂ ಗಾಂಧಿನಗರ ಗ್ರಾಮಗಳು ಬರುತ್ತವೆ. ದಶಕದ ಹಿಂದೆ ಈ ಊರಿಗೆ ಮೊಬೈಲ್ ಸಂಪರ್ಕ ಇರಲಿಲ್ಲ. ಮೂಲ ಸೌಲಭ್ಯಕ್ಕಾಗಿ ಜನ ಪರದಾಡುತ್ತಿದ್ದರು. ಹೊಸದಾಗಿ ಪಂಚಾಯಿತಿ ಆದ ನಂತರ ಸ್ವಲ್ಪ ಸುಧಾರಣೆಯಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಸಂತೋಷ ಪಾಟೀಲ, ಪಿಡಿಒ, ಗುಡಪಳ್ಳಿ2ನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪಡೆಯುವುದು ಸುಲಭದ ಮಾತಲ್ಲ. ನಮ್ಮ ಪಂಚಾಯಿತಿ ಸದಸ್ಯರ ಸಹಕಾರ ಅಧಿಕಾರಿಗಳ ಪ್ರೋತ್ಸಾಹದಿಂದ ಇದು ಸಾಧ್ಯವಾಗಿದೆ.

ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಿಂದ ಇಲ್ಲಿ ಅನೇಕ ಅಭಿವೃದ್ಧಿ ಕೆಲಸ ಆಗಿವೆ. ಗ್ರಾಮದ ಸರ್ಕಾರಿ ಶಾಲೆಗೆ ಕಾಂಪೌಂಡ್ ಗೋಡೆ, ಬಯಲು ರಂಗ ಮಂದಿರ, ರೈತರ ಹೊಲಗಳಿಗೆ ಹೋಗಲು ರಸ್ತೆ, ಜಾನುವಾರು ಕೊಟ್ಟಿಗೆ, ಕೃಷಿ ಹೊಂಡ, ಬದು ನಿರ್ಮಾಣ ಸೇರಿದಂತೆ ಸುಮಾರು ₹ 2.30 ಕೋಟಿ ವೆಚ್ಚದ ಕಾಮಗಾರಿ ಆಗಿವೆ ಎನ್ನುತ್ತಾರೆ ಅಧಿಕಾರಿಗಳು.

ಈ ಊರಿನ ಡಿಜಿಟಲ್ ಗ್ರಂಥಾಲಯ ಗಮನ ಸೆಳೆದಿದೆ. ಸುಸಜ್ಜಿತ ಕಟ್ಟಡ, ಅದಕ್ಕೆ ಸೋಲಾರ್ ಬೆಳಕಿನ ವ್ಯವಸ್ಥೆ, ಸ್ಪರ್ಧಾತ್ಮಕ ಪರೀಕ್ಷೆ ಬೇಕಾದವು ಸೇರಿದಂತೆ 5 ಸಾವಿರ ಪುಸ್ತಕಗಳ ಸಂಗ್ರಹ. ಮಕ್ಕಳು ಕಂಪ್ಯೂಟರ್‌ ಬಳಸುವುದು ನೋಡಿದರೆ ನಿಜಕ್ಕೂ ಸಂತಸ ಎನಿಸುತ್ತದೆ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಇಒ ಬೀರೇಂದ್ರಸಿಂಗ್ ಠಾಕೂರ್.

ಶಕುಂತಲಾ ರವೀಂದ್ರರೆಡ್ಡಿ, ಗುಡಪಳ್ಳಿ, ಗ್ರಾ.ಪಂ ಅಧ್ಯಕ್ಷೆನಮ್ಮ ಪಂಚಾಯಿತಿಗೆ ಗಾಂಧಿ ಗ್ರಾಮ ಪ್ರಶಸ್ತಿ ಸಿಕ್ಕಿದ್ದು ಸಂತಷವಾಗಿದೆ. ಇದು ನಮಗೆ ಇನ್ನಷು ಕೆಲಸ ಮಾಡಲು ಪ್ರೇರಣೆ ಸಿಕ್ಕಿದೆ.

ಉದ್ಯೋಗ ಖಾತರಿ ಜತೆಗೆ 15ನೇ ಹಣಕಾಸು ಯೋಜನೆ, ನಿಧಿ-1 ಯೋಜನೆಯನ್ನು ಪರಿಣಾಮಕಾರಿಯಾಗಿ ಬಳಸಿದ್ದೇವೆ. ಶಿಕ್ಷಣ, ಆರೋಗ್ಯ, ರೈತರ ಸ್ವಾವಲಂಬನೆಗಾಗಿಯೇ ಒತ್ತು ಕೊಟ್ಟು ಕೆಲಸ ಮಾಡಿದ ಕಾರಣ ನಮಗೆ ಗಾಂಧಿ ಗ್ರಾಮ ಪ್ರಶಸ್ತಿ ಲಭ್ಯವಾಗಿದೆ. ನಮ್ಮ ಆಡಳಿತ ಮಂಡಳಿ ಹಾಗೂ ಮೇಲಾಧಿಕಾರಿಗಳ ಸಹಕಾರವೂ ಇಲ್ಲಿ ಮುಖ್ಯವಾಗಿದೆ ಎಂದು ಪಿಡಿಒ ಸಂತೋಷ ಪಾಟೀಲ ಹೇಳುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು