Categories: ಬೀದರ್

ಬೀದರ್: ಬಾವಿಗೆ ಬಿದ್ದಿದ್ದ ಕೃಷ್ಣಮೃಗ ರಕ್ಷಣೆ

ಹುಲಸೂರ: ಪಟ್ಟಣದ ಅಂತರ ಭಾರತಿತಾಂಡ ಹೊರವಲಯದ ಚಂದ್ರಕಾಂತ ಬಸಪ್ಪಾ ಡೆಟ್ನೆ ಅವರ ಜಾಗದಲ್ಲಿ ತೆರೆದ ಬಾವಿಗೆ ಬಿದ್ದಿದ್ದ ಜಿಂಕೆಯನ್ನು ಅಗ್ನಿಶಾಮಕ ಸಿಬ್ಬಂದಿ ಬುಧವಾರ ಮಧ್ಯಾಹ್ನ ರಕ್ಷಿಸಿದ್ದಾರೆ.

ಮಂಗಳವಾರ ಸಂಜೆ 6 ಗಂಟೆಗೆ ಸಮೀಪದ ಅರಣ್ಯ ಪ್ರದೇಶದಿಂದ ಬಂದಿದ್ದ ಜಿಂಕೆ 2 ಅಡಿ ನೀರಿದ್ದ 40 ಅಡಿ ಆಳದ ಬಾವಿಗೆ ಬಿದ್ದಿದೆ.

ಇದನ್ನು ಗಮನಿಸಿದ ಚಂದ್ರಕಾಂತ ಬಸಪ್ಪಾ ಡೆಟ್ನೆ ಎಂಬುವವರು ಕೂಡಲೇ ಅಗ್ನಿಶಾಮಕ ಠಾಣೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಜಿಂಕೆಯನ್ನು ರಕ್ಷಿಸಿ ಅರಣ್ಯ ಇಲಾಖೆಯ ಸಿಬ್ಬಂದಿಗೆ ಒಪ್ಪಿಸಿದರು.

ಜಿಂಕೆಯನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿಗಳಿಗೆ ತಹಶೀಲ್ದಾರ ಶಿವಾನಂದ ಮೇತ್ರಿ ಅವರು ಪ್ರಶಂಸಾ ಪತ್ರ ನೀಡಿದರು.

ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಪ್ರವೀಣ ಕಲಷೆಟ್ಟೆ, ಉಪ ವಲಯ ಅರಣ್ಯ ಅಧಿಕಾರಿ ಸಂತೋಷ ಯಾಚೆ, ಸಿಬ್ಬಂದಿ ಶಿವಕುಮಾರ, ಸೋಮನಾಥ , ಶಿವರಾಜ, ಮಲ್ಲಿಕಾರ್ಜುನ, ರಾಮಪ್ರಸಾದ ಸಿಬ್ಬಂದಿಗಳು ಭಾಗವಹಿಸಿದ್ದರು

Ramya Bolantoor

Recent Posts

ಕೇರಳದ ಕೆಲವು ರಾಜ್ಯಗಳಿಗೆ ಮೇ 20 ರವರೆಗೆ ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

ಕೇರಳದ ಪತ್ತನಂತಿಟ್ಟ, ಇಡುಕ್ಕಿ, ಅಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಮೇ 20 ರವರೆಗೆ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್…

4 mins ago

ಕೇಜ್ರಿವಾಲ್ ನಿವಾಸದ ಸಿಸಿಟಿವಿ ಡಿವಿಆರ್ ಪೊಲೀಸ್‌ ವಶಕ್ಕೆ

ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ತಂಡವು ಭಾನುವಾರ…

7 mins ago

5 ದಿನ ಮೀನುಗಾರಿಕೆಗೆ ತೆರಳದಂತೆ ಉತ್ತರ ಕನ್ನಡ ಜಿಲ್ಲಾಡಳಿತ ಸೂಚನೆ

ಮೇ 18 ರಿಂದ ಮೇ 22 ರ ವರೆಗೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ…

20 mins ago

ರಾಹುಲ್, ಅಖಿಲೇಶ್ ಯಾದವ್ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಕಾಲ್ತುಳಿತ

 ಪಕ್ಷದ ಕಾರ್ಯಕರ್ತರ ಗದ್ದಲ, ಕಾಲ್ತುಳಿತದಂತಹ ಪರಿಸ್ಥಿತಿಯಿಂದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್…

21 mins ago

ಉತ್ತರ ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಾಸ್ ಕಾಪಿ ಆಗ್ತಿತ್ತು: ಭೋಜೇಗೌಡ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಸಾಮೂಹಿಕ ನಕಲು ಆಗುತ್ತಿರುವುದನ್ನು ವಿಧಾನ ಪರಿಷತ್‌ ಸದಸ್ಯ ಎಸ್.ಎಲ್.ಭೋಜೇಗೌಡ ಒಪ್ಪಿಕೊಂಡಿದ್ದಾರೆ. ಈ ಬಾರಿ…

29 mins ago

ನಗರ ಸಾರಿಗೆ ಬಸ್‌ ಮಾರ್ಗ ಬದಲಾಯಿಸಲು ಆಗ್ರಹ

ನಗರದಲ್ಲಿ ಸಂಚರಿಸುವ ನಗರ ಸಾರಿಗೆಯ ಎಲ್ಲ ಬಸ್‌ಗಳು ಡಾ.ಬಿ.ಆರ್.ಅಂಬೇಡ್ಕರ್ ಮುಖ್ಯ ವೃತ್ತದ ಮೂಲಕ ಹಾದು ಹೋಗುವಂತೆ ಕ್ರಮ ಕೈಗೊಳ್ಳಬೇಕೆಂದು ಎಂದು…

40 mins ago