Categories: ಬೀದರ್

ಔರಾದ: ಅಂಬೇಡ್ಕರ್ ಅವರ ತತ್ವ, ಸಿದ್ಧಾಂತ ಸದಾ ಪ್ರಸ್ತುತ

ಔರಾದ: ಶೋಷಿತ ವರ್ಗದ ಕಲ್ಯಾಣಕ್ಕಾಗಿ ಶ್ರಮಿಸಿದ ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳು ಇಂದಿನ ಜೀವನಕ್ಕೆ ಪ್ರಸ್ತುತವಾಗಿವೆ ಎಂದು ತಾಲ್ಲೂಕು ಯೋಜನಾಧಿಕಾರಿ ರತಿಕಾಂತ್ ನೆಳೆಗೆ ಹೇಳಿದರು.

ತಾಲ್ಲೂಕಿನ ವಡಗಾಂವ ದೇ ಗ್ರಾಮದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತದಾನ ಮಾಡುವುದು ಎಲ್ಲರ ಕರ್ತವ್ಯವಾಗಿದ್ದು 18 ವರ್ಷ ಮೇಲ್ಪಟ್ಟ ನಾಗರಿಕರು ಕಡ್ಡಾಯವಾಗಿ ಮತದಾನ ಮಾಡಬೇಕು. ನಿಮ್ಮ ಮತ ಅತ್ಯಂತ ಅಮೂಲ್ಯವಾಗಿದೆ ಎಂದು ಮತದಾನ ಕುರಿತು ಜಾಗೃತಿ ಮೂಡಿಸಿದರು. ಅಂಬೇಡ್ಕರ್‌ ಅವರು ಅಸಮಾನತೆಯ ವಿರುದ್ಧ ಹೋರಾಡಿದರು. ಶೋಷಿತರ ಪರವಾದ ಸಂವಿಧಾನ ರಚಿಸಿ ಎಲ್ಲರಿಗೂ ಸಾಮಾಜಿಕ ನ್ಯಾಯ ಕಲ್ಪಿಸಿದರು ಎಂದು ತಿಳಿಸಿದರು.

ಪಿಡಿಒ ವಿನೋದ್ ಕುಮಾರ್ ಕುಲಕರ್ಣಿ ಮಾತನಾಡಿ, ಅಂಬೇಡ್ಕರ್ ಅವರು ಎಲ್ಲ ವರ್ಗದವರ ಅಭಿವೃದ್ಧಿಗೆ ಶ್ರಮಿಸಿದರು. ಬೌದ್ಧ ಧರ್ಮದ ತತ್ವ, ಸಿದ್ಧಾಂತ ತಿಳಿದು ಬೌದ್ಧ ಧರ್ಮ ಸ್ವೀಕರಿಸಿದರು. ಅವರ ಅನುಯಾಯಿಗಳು ಬೌದ್ಧ ಧರ್ಮದ ಅಹಿಂಸಾ ಮಾರ್ಗದಲ್ಲಿ ನಡೆಯಬೇಕು ಎಂದರು.

ಈ ಸಂದರ್ಭದಲ್ಲಿ ಪಿಡಿಒ ವಿನೋದ್ ಕುಲಕರ್ಣಿ, ಸುಭಾಷ್ ಗ್ರಾಮ ಪಂಚಾಯತ್ ಸದಸ್ಯರಾದ ರಾಜಕುಮಾರ ಹೇಡೆ, ರವಿ ಗಂಗಾ, ಜೈವಂತ್, ಹಾಗೂ ಊರಿನ ಮುಖಂಡರಾದ ಝರೆಪ್ಪಾ ಸಿಂಗೆ, ಸಂಜು ಚವ್ಹಾಣ್, ಬಸವರಾಜ ಅಗನೂರೆ, ರಾಜು ಅಗನೂರೆ, ನಾಗನಾಥ್ ಅಗನೂರೆ, ಮಾರುತಿ ಅಡಕೆ, ತುಕರಾಮ್ ಅಡಕೆ, ಪುಂಡಲಿಕ ಅಡಕೆ, ರಾಜು ಅಡಕೆ, ಸಂಜು ಅಡಕೆ, ಗಣಪತಿ, ಓಂಕಾರ್ ಮೇತ್ರೆ, ಚಂದ್ರಕಾಂತ ನೆಳಗೆ, ಆಕಾಶ ಚಾಂಬಳೆ ಸೇರಿದಂತೆ ಇತರರು ಹಾಜರಿದ್ದರು.

Ashika S

Recent Posts

ಮೋದಿ ಪ್ರಧಾನ ಮಂತ್ರಿ ಅಲ್ಲ, ರಾಜ ಎಂದ ರಾಹುಲ್

ನಾನು ನಿಜವನ್ನೇ ಹೇಳುತ್ತಿದ್ದೇನೆ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಅಲ್ಲ ಬದಲಾಗಿ ಅವರು ರಾಜರು ಎಂದು ರಾಹುಲ್‌ ಗಾಂಧಿ ಹೇಳಿದರು.

3 mins ago

ಎಂ.ಸಿ. ಸಿ. ಬ್ಯಾಂಕಿನ ನೂತನ ಆಡಳಿತ ಕಛೇರಿ ಉದ್ಘಾಟನೆ, 112ನೇ ಸ್ಥಾಪಕರ ದಿನಾಚರಣೆ

ಎಂಸಿ.ಸಿ. ಬ್ಯಾಂಕಿನ ನೂತನ ನವೀಕೃತ ಅತ್ಯಾಧುನಿಕ ಸುಸಜ್ಜಿತ ಆಡಳಿತ ಕಛೇರಿಯ ಉದ್ಘಾಟನೆ ಹಾಗೂ ಬ್ಯಾಂಕಿನ 112ನೇ ಸಂಸ್ಥಾಪಕರ ದಿನಾಚರಣೆಯ ಸಮಾರಂಭ…

8 mins ago

ಬಿಕರ್ನಕಟ್ಟೆ- ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಿನ್ನೆಲೆ ಸ್ಥಳೀಯರು ಆಕ್ರೋಶ

ನಗರದ ಹೊರವಲಯದ ಗುರುಪುರ ಕೈಕಂಬದಲ್ಲಿ ನಿರ್ಮಾಣ ಆಗಲಿರುವ ಮೆಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು .ಕಾಮಗಾರಿ ವಿರುದ್ಧದ ಸ್ಥಳೀಯರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಾಮಗಾರಿ…

21 mins ago

ಕ್ರೂಸರ್ ವಾಹನ ಪಲ್ಟಿ: 3 ಮಹಿಳೆಯರು ಮೃತ್ಯು

ಮಹಾರಾಷ್ಟ್ರಕ್ಕೆ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಕ್ರೂಸರ್ ವಾಹನ ಪಲ್ಟಿಯಾಗಿ ಮೂವರು ಮಹಿಳೆಯರು ಸಾವನ್ನಪ್ಪಿರುವ ಘಟನೆ ಸಾಂಗೋಲಾ- ಜತ್ತ ಮಾರ್ಗದ ಬಳಿ…

23 mins ago

ಪ್ರಜ್ವಲ್ ನನ್ನು ಹುಡುಕಿ ಕೊಟ್ಟವರಿಗೆ 1 ಲಕ್ಷ ಬಹುಮಾನ: ಪೋಸ್ಟರ್ ಅಂಟಿಸಿದ್ದ ಕಾರ್ಯಕರ್ತರು ವಶಕ್ಕೆ

ಪ್ರಜ್ವಲ್ ರೇವಣ್ಣನನ್ನು ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಪೋಸ್ಟರ್ ಅಂಟಿಸಿದ್ದ ಜನತಾ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ…

36 mins ago

‘ಕಣ್ತಪ್ಪಿನಿಂದ’ ಆದ ಅಚಾತುರ್ಯ: ವಿಷಾದ ವ್ಯಕ್ತಪಡಿಸಿದ ಸುವರ್ಣ ನ್ಯೂಸ್

ಭಾರತದ ಮುಸ್ಲಿಮರ ಜನಸಂಖ್ಯೆ ತೋರಿಸಲು ಸುವರ್ಣ ನ್ಯೂಸ್ ಪಾಕಿಸ್ತಾನ ಧ್ವಜದ ಗ್ರಾಫಿಕ್ಸ್ ಬಳಸಿದ್ದು, ಭಾರೀ ಜನಾಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ…

43 mins ago