ಬಳ್ಳಾರಿ: ಸೇಬುಗಳನ್ನು ತುಂಬಿದ್ದ ಲಾರಿ ಪಲ್ಟಿಯಾಗಿ ಚೆಲ್ಲಾಪಿಲ್ಲಿಯಾಗಿ ರಸ್ತೆಯಲ್ಲಿ ಬಿದ್ದಿದ್ದ ಸೇಬುಗಳನ್ನು ಕ್ಷಣಮಾತ್ರದಲ್ಲೇ ಸಾರ್ವಜನಿಕರು ತುಂಬಿಕೊಂಡು ಹೋಗಿರುವ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕೂಡ್ಲಿಗಿ ತಾ| ಬಣವಿಕಲ್ಲು ಗ್ರಾಮದ ಬಳಿ ಸೇಬುಗಳನ್ನು ತುಂಬಿದ್ದ ಲಾರಿ ಪಲ್ಟಿಯಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿದರೂ ಸ್ಥಳೀಯರು ಕ್ಯಾರೆ ಎನ್ನದೆ ಸೇಬುಗಳನ್ನು ಚೀಲಗಳಲ್ಲಿ ತುಂಬಿಕೊಂಡಿದ್ದಾರೆ. ಈ ವೇಳೆ ಪೊಲೀಸರು ಏನೂ ಮಾಡಲಾಗದೆ ಅಸಹಾಯಕರಂತೆ ನಿಂತಿದ್ದಾರೆ. ನೂರಾರು ಮಂದಿ ಸೇಬುಗಳನ್ನು ಕ್ಷಣಮಾತ್ರದಲ್ಲೇ ಖಾಲಿ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.