ಕಲಬುರಗಿ : ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಜೆಡಿಎಸ್ ಜೊತೆ ಮೈತ್ರಿಗೆ ಕೈಚಾಚಿರುವ ಬಿಜೆಪಿ ಕಲಬುರಗಿಯ ಪಕ್ಷೇತರ ಕಾರ್ಪೊರೇಟರ್ ಒಬ್ಬರನ್ನು ಕಮಲದತ್ತ ಸೆಳೆದಿದೆ. ಕಲಬುರಗಿಯ 36ನೇ ವಾರ್ಡಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಡಾ. ಶಂಭುಲಿಂಗ ಬಳಬಟ್ಟಿ ಶಾಸಕ ದತ್ತಾತ್ರೇಯ ಪಾಟೀಲ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾದರು.
ಪಕ್ಷದ ಜಗನ್ನಾಥ ಭವನದಲ್ಲಿ ಪಾಲಿಕೆಗಳ ಚುನಾವಣೆಯ ಉಸ್ತುವಾರಿಯನ್ನು ಹೊತ್ತಿದ್ದ ಪಕ್ಷದ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಅವರು ಡಾ.ಶಂಭುಲಿಂಗ ಬಳಬಟ್ಟಿ ಅವರನ್ನು ಬಿಜೆಪಿ ಬರಮಾಡಿಕೊಂಡರು. ಶಂಭುಲಿಂಗ ಬಳಬಟ್ಟಿ ಬಿಜೆಪಿ ಸೇರ್ಪಡೆಯಾದ್ದರಿಂದ ಕಲಬುರಗಿಯಲ್ಲಿ ಬಿಜೆಪಿ ಸ್ಥಾನ 23 ರಿಂದ 24 ಕ್ಕೆ ಏರಿದೆ.