Bengaluru 22°C
Ad

ನೇಣು ಬಿಗಿದು ಪೊಲೀಸ್ ಕಾನ್​ಸ್ಟೇಬಲ್ ಆತ್ಮಹತ್ಯೆಗೆ ಶರಣು

ನೇಣು ಬಿಗಿದುಕೊಂಡು ಪೊಲೀಸ್ ಕಾನ್​ಸ್ಟೇಬಲ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ.

ಕಲಬುರಗಿ: ನೇಣು ಬಿಗಿದುಕೊಂಡು ಪೊಲೀಸ್ ಕಾನ್​ಸ್ಟೇಬಲ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. ಸಾವನ್ನಪ್ಪಿರುವ ವ್ಯಕ್ತಿಯನ್ನು ಮಾಡಬೂಳ ಠಾಣೆಯ ಪೊಲೀಸ್ ಕಾನ್​ಸ್ಟೇಬಲ್ ದೊಡ್ಡೇಶ್ (40) ಎಂದು ಗುರುತಿಸಲಾಗಿದೆ.

Ad
300x250 2

ಕೌಟುಂಬಿಕ ಕಲಹ ಹಿನ್ನೆಲೆ ದೊಡ್ಡೇಶ್​ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಕಲಬುರಗಿ ನಗರದ ಉದನೂರ ರಸ್ತೆಯಲ್ಲಿರುವ ಜಮೀನಿನಲ್ಲಿ ದೊಡ್ಡೇಶ್ ನೇಣಿಗೆ ಶರಣಾಗಿದ್ದಾರೆ.

ಕಲಬುರಗಿ ನಗರದ ಹೈ ಕೋರ್ಟ್ ಬಳಿ ದೊಡ್ಡೇಶ್ ವಾಸವಿದ್ದರು.  ಗುಲ್ಬರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

Ad
Ad
Nk Channel Final 21 09 2023
Ad