ಕಲಬುರಗಿ: ಪೋಕ್ಸೊ ಕೇಸ್‌ನಲ್ಲಿ ಲಂಚ ಪಡೆಯುತ್ತಿದ್ದ ಕಾನ್‌ಸ್ಟೇಬಲ್‌, ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಲಬುರಗಿಯ ಸ್ಟೇಷನ್ ಬಜಾರ್ ಕಾನ್‌ಸ್ಟೇಬಲ್ ಜ್ಯೋತಿ‌ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಟೇಷನ್‌ನಲ್ಲೇ ಹತ್ತು ಸಾವಿರ ಹಣ ಪಡೆಯುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಚಿಂದಿ ಆಯುವ ಮಹಿಳೆಯ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಲೈಂಗಿಕ ದೌರ್ಜನ್ಯ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ‘ಪ್ರಕರಣದ ಚಾರ್ಜ್‌ಶೀಟ್ ದಾಖಲಿಸಲಾಗುತ್ತಿದೆ. ಕೇಸ್ ನಿಮ್ಮ‌ ಪರವಾಗಿ ಆಗುವಂತೆ ನೋಡಿಕೊಳ್ಳುತ್ತೇವೆ’ ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದರು.‌

ಹಣ ಪಡೆಯುವಾಗ ಲೋಕಾ ಇನ್‌ಸ್ಪೆಕ್ಟರ್‌ ಅರುಣ್ ಮುರಗುಂಡಿ ತಂಡ ದಾಳಿ ನಡೆಸಿತ್ತು. ಟೇಬಲ್ ಜ್ಯೋತಿಯನ್ನ ವಶಕ್ಕೆ ಪಡೆದ ಲೋಕಾ ಪೊಲೀಸರು, ಕಾನ್‌ಸ್ಟೇಬಲ್ ಜ್ಯೋತಿ ಲೋಕಾ ಬಲೆಗೆ ಬಿಳ್ತಿದ್ದ ಮತ್ತೊಬ್ಬ ಎಎಸ್‌ಐ ಸ್ಟೇಷನ್‌ನಿಂದ ಎಸ್ಕೇಪ್ ಆಗಿದ್ದಾರೆ. ಪರಾರಿಯಾಗಿರುವ ಎಎಸ್‌ಐಗಾಗಿ ಹುಡುಕಾಟ ನಡೆಸಲಾಗಿದೆ.