ಹುಬ್ಬಳ್ಳಿ : ಶ್ರೀಲಂಕಾದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ. ಒಂದನೇಯ ಏಷಿಯನ್ ಪ್ಯಾರಾಸಿಟಿಂಗ್ ತ್ರೋಬಾಲ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಮಹಿಳಾ ತಂಡ ಚಾಂಪಿಯನಾಗಿ ಹೊರ ಹೊಮ್ಮಿದ್ದು, ವಿಜೇತ ತಂಡಗಳಲ್ಲಿ ಹುಬ್ಬಳ್ಳಿಯ ಸಂಗವ್ವ ( ಸಂಗೀತಾ ) ಆಲದ ಗಿಡದ ಆಟಗಾರ ಆಗಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಹುಬ್ಬಳ್ಳಿಗೆ ಹೆಮ್ಮೆ ತಂದಿದ್ದಾರೆ. ಅಷ್ಟೇ ಅಲ್ಲದೆ ನ್ಯೂಸ್ ಕರ್ನಾಟಕ ಅವರ ಕುರಿತು ವಿಶೇಷ ವರದಿ ಪ್ರಸಾರ ಮಾಡಿತ್ತು. ಸುದ್ದಿ ವಾಹಿನಿಗೂ ಕೂಡಾ ಧನ್ಯವಾದ ತಿಳಿಸಿದ್ದಾರೆ.
ಏಷಿಯನ್ ಪ್ಯಾರಾ ಟ್ರೋಬಲ್ ಫೆಡರೇಶನ್ ಆಫ್ ಇಂಡಿಯನ್ ಮತ್ತು ಏಷಿಯನ್ ಪ್ಯಾರಾ ತ್ರೋಬಾಲ್ ಎಡರ ಸನ್ ಆಫ್ ಶ್ರೀಲಂಕಾ ಸಹಯೋಗದಲ್ಲಿ ಶ್ರೀಲಂಕದ ಕೊಲಂಬದಲ್ಲಿ ಜುಲೈ 23 ರಿಂದ 26 ವರೆಗೆ ಪಂದ್ಯ ನಡೆದಿತ್ತು. ಅಂತರ್ರಾಷ್ಟ್ರೀಯ ಮಟ್ಟದ ಏಷಿಯನ್ ಪ್ಯಾರಾಸಿಟಿಂಗ್ ತ್ರೋಬಾಲ್ ಚಾಂಪಿಯನ್ಶಿಪನಲ್ಲಿ ಭಾರತ ಮತ್ತು ಶ್ರೀಲಂಕಾದ ಭಾಗವಹಿಸಿ ಫೈನಲ್ ಪಂದ್ಯದಲ್ಲಿ ಮಹಿಳಾ ತಂಡವು ಶ್ರೀಲಂಕಾ ವಿರುದ್ಧ ಗೆಲುವಿಗೆ ನಗೆ ಬೀರಿತು. ವಿಜೇತ ತಂಡದ ಗೀತಾ,ಜ್ಯೋತಿ, ಮನಿಷಾ, ಭಾಗೀರಥಿ ಇತ್ಯಾದಿ ಸೇರಿ ಭಾರತವನ್ನು ಪ್ರತಿನಿಧಿಸಿದರು. ಮಹಿಳೆಯರ ತಂಡದಲ್ಲಿ ಸಂಗವ್ವ ( ಸಂಗೀತ )ಆಲದಗಿಡದ ಅತ್ಯುತ್ತಮ ಆಟ ಪ್ರದರ್ಶನ ಮಾಡಿ ಹುಬ್ಬಳ್ಳಿಯ ಕೀರ್ತಿ ಪತಾಕೆಯನ್ನು ಶ್ರೀಲಂಕಾದಲ್ಲಿ ಮುಳಗಿಸಿದೆ.

