ಪಾಕಿಸ್ತಾನದ ಈ ಮುದಿಯನ ದುರಾಸೆಗೆ ಏನೂ ಕಡಿಮೆ ಇಲ್ಲ. ಒಂದು ವೇಳೆ ಭಾರತದ ವಿರುದ್ಧ ಯುದ್ಧವಾದರೆ 10 ಹಿಂದೂಗಳ ಹತ್ಯೆ ಮಾಡಿ, ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಕಿಡ್ನಾಪ್ ಮಾಡುತ್ತೇನೆ ಎಂದು ಪಾಕಿಸ್ತಾನದ ಈ ಮುದುಕ ಹೇಳಿದ್ದಾನೆ. ಈತನ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಭಾರತ ಕುರಿತು ಕೆಲ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಈ ಮುದುಕ, ಏಕಾಏಕಿ ಒಂದು ವೇಳೆ ಭಾರತದ ವಿರುದ್ದ ಯುದ್ದವಾದರೆ ನಾನು 10 ಹಿಂದೂಗಳನ್ನು ಹತ್ಯೆ ಮಾಡುತ್ತೇನೆ ಎಂದಿದ್ದಾನೆ. ತಕ್ಷಣವೆ ಮರು ಪ್ರಶ್ನಿಸಿದ ನಿರೂಪಕ, ಅವರು ಮನುಷ್ಯರು, ಈ ರೀತಿಯ ಆಲೋಚನೆ ಬದಲಿಸಬೇಕು ಎಂದು ಅನಿಸುತ್ತಿಲ್ಲವೇ ಎಂದಿದ್ದಾರೆ.

ಆದರೆ ಮುದುಕನ ದುರಾಸೆಯನ್ನು ಹೇಳದೆ ಇರಲು ಸಾಧ್ಯವಾಗಲಿಲ್ಲ. ನೋಡಿ, ಯುದ್ಧ ಆರಂಭಗೊಂಡರೆ ಮೊದಲು ನಾನು ಭಾರತಕ್ಕೆ ತೆರಳಿ ಮಾಧುರಿ ದೀಕ್ಷಿತ್ ಅಪಹರಿಸುತ್ತೇನೆ ಎಂದಿದ್ದಾನೆ. ಈ ಮಾತುಗಳನ್ನು ಕೇಳಿದ ನಿರೂಪಕನಿಗೂ ಅಚ್ಚರಿಯಾಗಿದೆ. ನಿಮ್ಮ ವಯಸ್ಸು ಹಾಗೂ ನೀವು ಹೇಳಿಕ ಮಾತು ಏನು ಅನ್ನೋದು ಒಂದು ಬಾರಿ ನೋಡಿ ಎಂದು ನಿರೂಪಕ ಹೇಳಿದ್ದಾನೆ.ಇದು ಪಾಕಿಸ್ತಾನದಲ್ಲಿರುವ ಬಹುತೇಕರ ಮನಸ್ಥಿತಿ ಎಂದು ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ.

https://x.com/i/status/1811307180571894180