ಕರ್ನಾಟಕದ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಆಗಸ್ಟ್ 6 ರವರೆಗೂ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಉಡುಪಿ, ಉತ್ತರ ಕನ್ನಡ, ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಶಿವಮೊಗ್ಗ, ಚಿಕ್ಕಮಗಳೂರು, ಬೆಳಗಾವಿ ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರಿನಲ್ಲಿ ಕೂಡ ಮಳೆಯಾಗಲಿದೆ.
ಆಗುಂಬೆ, ಮಾಣಿ, ಕ್ಯಾಸಲ್ರಾಕ್, ಕಾರ್ಕಳ, ಉಪ್ಪಿನಂಗಡಿ, ಮಂಕಿ, ಪುತ್ತೂರು, ಕಮ್ಮರಡಿ, ಬೆಳ್ತಂಗಡಿ, ಪಣಂಬೂರು, ಮುಲ್ಕಿ, ಭಾಗಮಂಡಲ, ಮೂಡಿಗೆರೆ, ಧರ್ಮಸ್ಥಳ, ಕದ್ರಾ, ಕೊಲ್ಲೂರು, ಮಂಗಳೂರು, ಅಂಕೋಲಾ, ಶೃಂಗೇರಿಯಲ್ಲಿ ಮಳೆಯಾಗಿದೆ.
ಲೋಂಡಾ, ತರೀಕೆರೆ, ಲಿಂಗನಮಕ್ಕಿ, ಕುಮಟಾ, ಜಯಪುರ, ಶಿರಾಲಿ, ಸುಳ್ಯ, ಕಳಸ, ಕೊಪ್ಪ, ನಾಪೊಕ್ಲು, ಕೊಟ್ಟಿಗೆಹಾರ, ಗೋಕರ್ಣ, ಕೋಟ, ಹುಂಚದಕಟ್ಟೆ, ಕಾರವಾರ, ಪೊನ್ನಂಪೇಟೆ, ತ್ಯಾಗರ್ತಿ, ಸೋಮವಾರಪೇಟೆ, ಎನ್ಆರ್ಪುರ, ಬನವಾಸಿ, ಹಾರಂಗಿ, ಕುಶಾಲನಗರ, ಹಳಿಯಾಳ, ಕೆಆರ್ ನಗರ, ಕೂಡಲಸಂಗಮ, ಸೇಡಬಾಳ, ದಾವಣಗೆರೆ, ಕೃಷ್ಣರಾಜಸಾಗರದಲ್ಲಿ ಮಳೆಯಾಗಿದೆ.

