ಕರ್ನಾಟಕದ 12ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ,ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗಕ್ಕೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ವಿಜಯನಗರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಕೋಲಾರ,ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರದಲ್ಲಿ ಮಳೆಯಾಗಲಿದೆ.

ಕ್ಯಾಸಲ್​ರಾಕ್, ಬೀದರ್, ಭಾಲ್ಕಿ, ಆಗುಂಬೆ, ಗಬ್ಬೂರು, ರಾಯಚೂರು, ಶೋರಾಪುರ, ಗೇರುಸೊಪ್ಪ, ಲೋಂಡಾ, ಮುನ್ನಳ್ಳಿ, ಸಿದ್ದಾಪುರ, ಧರ್ಮಸ್ಥಳ, ಕಲಘಟಗಿ, ಕವಡಿಮಟ್ಟಿ, ದೇವದುರ್ಗ, ದೇವರಹಿಪ್ಪರಗಿ, ಔರಾದ್, ಸಿಂಧನೂರು, ಶೃಂಗೇರಿ, ಮಂಕಿ, ಕದ್ರಾ, ಬೆಳ್ತಂಗಡಿ, ಹಳಿಯಾಳದಲ್ಲಿ ಮಳೆಯಾಗಿದೆ.

ಉಡುಪಿ, ಕಾರ್ಕಳ, ಶಾಹಪುರ, ಕಮ್ಮರಡಿ, ಕೊಪ್ಪ, ಎನ್​ಆರ್​ಪುರ, ಗೋಕರ್ಣ, ಹೊನ್ನಾವರ, ಧಾರವಾಡ, ಕುಂದಗೋಳ, ಕುರ್ಡಿ, ಕೂಡಲಸಂಗಮ, ಹುಬ್ಬಳ್ಳಿ, ಮಾನ್ವಿ, ಕೂಡಲಸಂಗಮ, ಜಯಪುರ, ಕೊಟ್ಟಿಗೆಹಾರ, ಕಳಸದಲ್ಲಿ ಮಳೆಯಾಗಿದೆ.