ಹಾಸನ : ಸರ್ಕಾರಿ ಶಾಲೆಯ ಬಾಗಿಲು ಮುಂದೆ ಹಾಗೂ ಶಾಲೆಯ ಆವರಣದಲ್ಲಿ ಕಿಡಿಗೇಡಿಗಳು ವಾಮಾಚಾರ ಮಾಡಿರುವ ಘಟನೆ ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ, ಮುದುಡಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.

ಒಂಭತ್ತನೇ ತರಗತಿ ಕೊಠಡಿ ಎದರು ಬೆಚ್ಚಿ ಬೀಳಿಸುವ ವಾಮಾಚಾರ ಮಾಡಿದ್ದಾರೆ. ಕೊಠಡಿಯ ಬಾಗಿಲಿಗೆ ಹಾಕಿರುವ ಬೀಗಕ್ಕೆ ಹಸಿ ನೂಲು ಕಿಡಿಗೇಡಿಗಳು ಸುತ್ತಿದ್ದಾರೆ. ಕೊಠಡಿಯ ಬಾಗಿಲಿನಿಂದ ನಾಲ್ಕು ದಿಕ್ಕುಗಳಿಗೂ ಹಸಿ ನೂಲು ಕಟ್ಟಿದ ದುರುಳರು.
ಕೊಠಡಿ ಮುಂದೆ ಹರಿಶಿನ, ಕುಂಕುಮ, ಬಾಳೆಹಣ್ಣು, ತೆಂಗಿನಕಾಯಿ ಇಟ್ಟಿದ್ದಾರೆ. ಸತತ ಎರಡು ದಿನಗಳಿಂದ ವಾಮಾಚಾರ ನಡೆಯುತ್ತಿದೆ. ಬುಧವಾರ ರಾತ್ರಿ ಶಾಲೆಯ ಎದುರು ತೆಂಗಿನಗರಿಯಿಂದ ಚಪ್ಪರ ಹಾಕಿ ಗೊಂಬೆ ಮುರಿದಿರುವ ಅಪರಿಚಿತರು. ಎಳನೀರು, ಹೊಂಬಾಳೆ, ತೆಂಗಿನಕಾಯಿ, ಕಿತ್ತಳೆಹಣ್ಣು, ಇತರೆ ಪೂಜಾ ಪದಾರ್ಥಗಳನ್ನಿಟ್ಟು ಮಾಟ-ಮಂತ್ರ ದುರುಳರು ಮಾಡಿದ್ದಾರೆ.

ವಾಮಾಚಾರದಿಂದ ಶಾಲೆಯ ಮಕ್ಕಳಲ್ಲಿ ಆತಂಕ ಉಂಟಾಗಿದೆ. ಈ ಸರ್ಕಾರಿ ಪ್ರೌಢಶಾಲೆಯಲ್ಲಿ ಸುಮಾರು ಎಪ್ಪತ್ತು ಮಕ್ಕಳಿದ್ದಾರೆ. ಪೊಲೀಸ್ ಠಾಣೆಗೆ ದೂರು ನೀಡಲು ಶಾಲೆಯ ಮುಖ್ಯೋಪಾಧ್ಯಾಯರು ಮುಂದಾಗಿದ್ದಾರೆ.

