ಹಾಸನ: ಯುವಕನ ಮೇಲೆ ಕಾಡಾನೆ ದಾಳಿಗೆ ಯತ್ನಿಸಿದ್ದು, ಕೂದಲೆಳೆ ಅಂತರದಲ್ಲಿ ಯುವಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬೆಳ್ಳೂರು ಗ್ರಾಮದಲ್ಲಿ ನಡೆದಿದೆ.

ಅಟ್ಟಿಸಿಕೊಂಡು ಬಂದ ಆನೆ ಹಿಂದೆ ಮುಂದೆ ಓಡಾಡಿ ಯುವಕ ಜೀವ ಉಳಿಸಿಕೊಂಡಿದ್ದಾನೆ. ಹೇಮಾವತಿ ನದಿ ದಡದ ಬಯಲಿನಲ್ಲಿ ಜೀಪ್ ಡರ್ಟ್‌ ರೇಸ್ ಮಾಡುವಾಗ ಒಂಟಿಸಲಗ ದಾಳಿ ಮಾಡಲು ಬಂದಿದೆ.

ಯುವಕ ಪ್ರಾಣ ಉಳಿಸಿಕೊಳ್ಳಲು ಹೋರಾಟ ಮಾಡಿದ ವಿಡಿಯೋ ವೈರಲ್ ಆಗಿದೆ. ವಾಹನಗಳ ಹಾರ್ನ್ ಹೊಡೆದು ಜನರು ಕಾಡಾನೆಯನ್ನು ಓಡಿಸಿದ್ದಾರೆ. ಸಕಲೇಶಪುರದ ಹಾನುಬಾಳ್ ನಲ್ಲಿ ಯುವಕ ವಾಸ ಇದ್ದನು. ಜೀಪ್ ರೇಸ್ ಗೆ ಸ್ಪರ್ಧಿಯಾಗಿ ಯುವಕ ಬಂದಿದ್ದನು. ಯಾವುದೇ ಗಾಯವು ಆಗದೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.