ಸಕಲೇಶಪುರ: 2 ದಿನಗಳಿಂದ ಮಳೆ ಬಿಡುವು ಕೊಟ್ಟಿರುವುದರಿಂದ ರಾಷ್ಟ್ರೀಯ ಹೆದ್ದಾರಿ- 75ರ ಶಿರಾಡಿ ಘಾಟಿ ಮಾರ್ಗದಲ್ಲಿ ವಾಹನಗಳ ಸಂಚಾರ ಪುನರಾರಂಭವಾಗಿದೆ.
ಸಕಲೇಶಪುರ ಸಮೀಪ ದೊಡ್ಡತಪ್ಪಲು ಬಳಿ ಮತ್ತು ಶಿರಾಡಿ ಘಾಟಿಯಲ್ಲಿ ರಸ್ತೆ ಮೇಲೆ ಭೂ ಕುಸಿತ ಸಂಭವ ಹಿನ್ನೆಲೆಯಲ್ಲಿ ಸಕಲೇಶಪುರದಿಂದ ಮಂಗಳೂರು, ಧರ್ಮಸ್ಥಳದ ನಡುವೆ ರಾತ್ರಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಆದರೆ ರವಿವಾರ ಸಂಜೆಯಿಂದ ಮಳೆ ಅಬ್ಬರ ಕಡಿಮೆಯಾಗುತ್ತ ಬಂದಿದ್ದು, ಸೋಮವಾರ ಮಳೆ ಬಿಡುವು ಕೊಟ್ಟಿರುವುದರಿಂದ ಶಿರಾಡಿ ಘಾಟಿ ಮಾರ್ಗದಲ್ಲಿ ಎಲ್ಲ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ದಿನದ 24 ತಾಸು ಕೂಡ ವಾಹನ ಸಂಚಾರ ಸೋಮವಾರದಿಂದಲೇ ಆರಂಭವಾಗಿದೆ.
ಸುಳ್ಯ: ಭಾರೀ ಮಳೆಗೆ ಮಣ್ಣು ಕುಸಿತ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಸಂಪಾಜೆ-ಮಡಿಕೇರಿ ನಡುವೆ ರಾತ್ರಿ ಹೇರಲಾಗಿದ್ದ ನಿರ್ಬಂಧ ಸೋಮವಾರ ಬೆಳಗ್ಗೆ ಮುಕ್ತಾಯಗೊಂಡಿದ್ದು, ಸೋಮವಾರ ರಾತ್ರಿ ಮತ್ತೆ ಸಂಚಾರ ಪುನರಾರಂಭಗೊಂಡಿದೆ.

