ಗದಗ : ಲಕ್ಷ್ಮೇಶ್ವರ ಪಟ್ಟಣದ ಕಟ್ಟಿಲೇಔಟ್ ಬಳಿ ರೌಡಿಶೀಟರ್ ಒಬ್ಬನ ಬರ್ಬರ ಕೊಲೆ ನಡೆದಿದೆ.
ಬೈಕ್ ಮೇಲೆ ಬಂದಿದ್ದ ಮೂವರು ಆನಾಮಿಕರು ರೌಡಿಶೀಟರ್ ಇರ್ಫಾನ್ ತಹಶೀಲ್ದಾರ್(36) ಗೆ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾರೆ. ಹಳೆದ ದ್ವೇಷದ ಹಿನ್ನೆಲೆ ಕೊಲೆ ನಡೆದಿರುವ ಬಗ್ಗೆ ಅನುಮಾನ ಮೂಡಿದೆ.
ವಿಷ್ಯ ತಿಳಿದು ಸ್ಥಳಕ್ಕೆ ಬಂದಿದ್ದ ಇರ್ಪಾನ್ ಸಂಬಂಧಿಕರು, ರೌಡಿಶೀಟರ್ ಅಬ್ದುಲ್ ಆಡೂರ್ ವಿರುದ್ಧ ಆರೋಪ ಮಾಡ್ತಿದ್ದು. ಕೊಲೆಯ ಹಿಂದೆ ರೌಡಿಶೀಟರ್ ಅಬ್ದುಲ್ ಕೈವಾಡ ಇದೆ ಅಂತಾ ಆರೋಪ ಮಾಡ್ತಿದ್ದಾರೆ. ಅಬ್ದುಲ್ ಸಹಚರರೇ ಹತ್ಯೆ ಮಾಡಿದ್ದಾರೆ ಅಂತೆಯೂ ಹೇಳಿಕೊಂಡಿದ್ದಾರೆ.
ಅಬ್ದುಲ್ ಆಡೂರ್ ಹಾಗೂ ಮೃತ ಇರ್ಫಾನ್ ತಹಶೀಲ್ದಾರ್ ಮಧ್ಯೆ ಈ ಹಿಂದಿನಿಂದಲೂ ಗಲಾಟೆ ನಡೆದಿತ್ತು. ಹಣ ಕಾಸಿನ ವಿಷಯವಾಗಿಯೂ ಎರಡು ಗುಂಪಿನ ಮಧ್ಯೆ ವೈಮನಸ್ಸು ಇತ್ತು ಎನ್ನಲಾಗಿದ್ದು ಸದ್ಯ ಸ್ಥಳಕ್ಕೆ ಲಕ್ಷ್ಮೇಶ್ವರ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಸ್ಥಳಕ್ಕೆ ಸೀನ್ ಆಫ್ ಕ್ರೈಮ್ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು, ತನಿಖೆಯಿಂದಷ್ಟೆ ಕೊಲೆಗೆ ಕಾರಣ ತಿಳಿಬೇಕಿದೆ.

