ಕೇರಳ: ಕಾಸರಗೋಡಿನ ದೇವಸ್ಥಾನದಲ್ಲಿ ಪಟಾಕಿ ಸಿಡಿದು ಹಲವರಿಗೆ ಗಾಯಗೊಂಡಿರುವ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ನೀಲೇಶ್ವರದ ವೀರರ್ ಕಾವು ದೇವಸ್ಥಾನದಲ್ಲಿ ನಡೆದಿದೆ.

ತೆಯ್ಯಂಕೆಟ್ಟು ಮಹೋತ್ಸವದಲ್ಲಿ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಕುಲಿಚು ತೊಟ್ಟಂ ಆಚರಣೆ ವೇಳೆ ಪಟಾಕಿ ಸಿಡಿಸುವಾಗ ಈ ಘಟನೆ ಸಂಭವಿಸಿದೆ. ಪಟಾಕಿ ದಾಸ್ತಾನಿಟ್ಟಿದ್ದ ಗೋದಾಮಿಗೆ ಕಿಡಿ ಹಬ್ಬಿ ಭಾರೀ ಸ್ಪೋಟಗೊಂಡಿದೆ. ಘಟನೆಯಲ್ಲಿ 150 ಕ್ಕೂ ಅಧಿಕ ಮಂದಿಗೆ ಗಾಯಗೊಂಡಿದ್ದಾರೆ.

ಪಟಾಕಿ ಸಿಡಿದು ಸುಮಾರು ಐದು ಜನರ ಪರಿಸ್ಥಿತಿ ಗಂಭೀರವಾಗಿದೆ. ಕಣ್ಣೂರು, ಕಾಸರಗೋಡು ಹಾಗೂ ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.