ನವದೆಹಲಿ: ಸಿಖ್ ಹತ್ಯಾಕಾಂಡಕ್ಕೆ ನ.19 ರಂದು 40 ವರ್ಷ ಪೂರ್ಣಗೊಳ್ಳುತ್ತದೆ ಈ ಹಿನ್ನೆಲೆ ಏರ್ ಇಂಡಿಯಾ ವಿಮಾನದ ಮೇಲೆ ನವೆಂಬರ್ 19ರ ಬಳಿಕ ದಾಳಿ ನಡೆಯಲಿದೆ ಎಂದು ಖಲಿಸ್ತಾನಿ ಭಯೋತ್ಪಾದಕ ಪನ್ನುನ್ ಬೆದರಿಕೆ ಹಾಕಿದ್ದಾನೆ.
ಯುಎಸ್ ಮತ್ತು ಕೆನಡಾದ ದ್ವಿಪೌರತ್ವ ಹೊಂದಿರುವ ಹಾಗೂ ಎ ಸಿಖ್ಸ್ ಫಾರ್ ಜಸ್ಟಿಸ್ ಸಂಸ್ಥಾಪಕನಾಗಿರುವ ಪನ್ನುನ್ ಕಳೆದ ವರ್ಷವು ಸಂಸತ್ ಭವನವನ್ನು ಸ್ಫೋಟಿಸುವುದಾಗಿ ಇದೇ ರೀತಿಯ ಎಚ್ಚರಿಕೆ ನೀಡಿದ್ದ. 1984ರಲ್ಲಿ ನಡೆದಿದ್ದ ಸಿಖ್ ವಿರೋಧಿ ದಂಗೆಗೆ 40 ಪೂರ್ಣಗೊಳ್ಳುತ್ತಿರುವ ಹಿನ್ನೆಲೆ ಏರ್ ಇಂಡಿಯಾ ವಿಮಾನಗಳನ್ನು ಹತ್ತಿಕ್ಕುತ್ತೇವೆ ಎಂದು ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಬೆದರಿಕೆ ಹಾಕಿದ್ದಾನೆ.
ನವೆಂಬರ್ 19 ರಿಂದ ಜಾಗತಿಕವಾಗಿ ದಿಗ್ಬಂಧನವಿರಲಿದ್ದು, ಏರ್ ಇಂಡಿಯಾ ವಿಮಾನ ಕಾರ್ಯನಿರ್ವಹಿಸುವುದಿಲ್ಲ. ಸಿಖ್ ಪಂಥದವರು ನವೆಂಬರ್ 19ರ ಬಳಿಕ ಏರ್ ಇಂಡಿಯಾದಲ್ಲಿ ಪ್ರಯಾಣಿಸಬಾರದು ಎಂದು ಕೇಳಿಕೊಳ್ಳುತ್ತೇನೆ. ಭಾರತದ ಧ್ವಜವನ್ನು ಅವಮಾನಿಸಿರುವುದು ಹಾಗೂ ಭಾರತೀಯ ರಾಜತಾಂತ್ರಿಕರಿಗೆ ಬೆದರಿಕೆ ಹಾಕಿರುವ ಹಿನ್ನೆಲೆ ಪನ್ನುನ್ ಹಲವಾರು ಪ್ರಕರಣಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ ಆರೋಪಿಯಾಗಿದ್ದಾನೆ.

