ಧಾರವಾಡ : ಸ್ಪೋಕರ್ ಆಡುತ್ತಿದ್ದ ಯುವಕನೋರ್ವ ಆಟ ಆಡುತ್ತಿರುವಾಗಲೇ ದಿಡೀರ್‌  ಹೃದಯಾಘಾತದಿಂದ  ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯ ರಜತಗಿರಿಯಲ್ಲಿ ಸಂಭವಿಸಿದೆ.

ಗೆಳೆಯರೊಂದಿಗೆ ಆಟ ಆಡಲು ಹೋಗಿದ್ದ  ಸುಶಾಂತ್ ಮಲ್ಲಿಗೇರಿ ಎಂಬ ಯುವಕ ಆಟ ಆಡುತ್ತಿರುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದವನು. ಇದು ಕುಟುಂಬಕ್ಕೆ ಅಘಾತವನ್ನುಂಟುಮಾಡಿದೆ. ಸ್ಪೋಕರ್ ಆಡಲೆಂದು ಬಂದ ಯುವಕನ ಜೀವನದಲ್ಲಿ ವಿಧಿ ಬೇರೆ ಆಟವನ್ನೇ ಆಡಿಬಿಟ್ಟಿದೆ. ಈ ಸಂಬಂಧ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.