ಕುಂದಗೋಳ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ತಾಲೂಕಾ ಘಟಕ ಕುಂದಗೋಳ ನಿವೃತ್ತ ನೌಕರರ ಸಂಘದಿಂದ ಶಾಸಕ ಎಂ.ಆರ್ ಪಾಟೀಲ್ ಮತ್ತು ತಾಲೂಕ ದಂಡಾಧಿಕಾರಿ ಅಶೋಕ ಶಿಗ್ಗಾಂವಿ ಇವರಿಗೆ ತಮ್ಮ ಮನವಿ ಪತ್ರವನ್ನು ನೀಡಿದರು.

ಸರ್ಕಾರದ ಮುಂದಿರುವ ನಿವೃತ್ತ ನೌಕರರ ಪ್ರಮುಖ ಬೇಡಿಕೆಗಳಲ್ಲಿ ರಾಜ್ಯ 7ನೇ ವೇತನ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಿ ಆದೇಶ ಹೊರಡಿಸುವುದು.

ಪ (3)

ಎನ್.ಪಿ.ಎಸ್ ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸುವುದು. ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ (ಕೆ.ಎ.ಎಸ್.ಎಸ್. ) ಅನುಷ್ಠಾನಗೊಳಿಸುವುದು ಏಳನೇ ವೇತನ ಆಯೋಗದ ಶಿಪಾರಸ್ಸಿನಂತೆ ನಿವೃತ್ತ ರಾಜ್ಯ ಸರಕಾರಿ ನೌಕರರಿಗೆ ಮಾಡಿದ ಶಿಫಾರಸ್ಸುಗಳನ್ನು ಯಥಾವತ್ತಾಗಿ ಜಾರಿಗೆ ಗೋಳಿಸಬೇಕೆಂದು ಮನವಿ ಪತ್ರವನ್ನು ನೀಡಿದರು.

ಈ ಸಂದರ್ಭದಲ್ಲಿ ತಾಲೂಕ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಎನ್‌.ಎಫ್ ನದಾಫ್ ತಾಲೂಕ ನಿವೃತ್ತ ನೌಕರ ಸಂಘದ ಕಾರ್ಯಾಧ್ಯಕ್ಷರಾದ ಎಸ್.ಜಿ ಬಿಸೇರೋಟ್ಟಿ, ತಾಲೂಕ ನಿವೃತ್ತಿ ನೌಕರ ಸಂಘದ ಪ್ರಧಾನ ಕಾರ್ಯದರ್ಶಿಯಾದ ವಿ.ಡಿ.ಯರಗುಪ್ಪಿ ತಾಲೂಕು ನಿವೃತ್ತ ನೌಕರ ಸಂಘದ ಉಪಾಧ್ಯಕ್ಷರಾದ ಸಿ.ಎಫ್.ಡಪಳಿ. ತಾಲೂಕಾ ನಿವೃತ್ತ ನೌಕರರ ಸಂಘದ ಕಾನೂನು ಸಲಹೆಗಾರರು. ಅರ್ ವಾಯ್ ಕಟ್ಟಿ. ನಿವೃತ್ತ ನೌಕರರಾದ ವಿ.ಎಫ್. ಹಿರೇಮರ್ ಎಸ್.ಎನ್ ಅರಳಿಕಟ್ಟಿ ಜೆ.ಜಿ ಸುಂಕದ ವಿ.ಎಲ್.ಅತ್ತಿಗೇರಿ. ಬಿ.ಸಿ.ಕರೆಯಣ್ಣವರ. ಜೆ.ಎಮ್ ನಂದಿಮಠ. ವಿ.ಎಸ್ ಶೆಟ್ಟಿ.ಸಪ್ಪನವರ. ಎ.ವಿ.ಡಿ.ಬಿ.ಚಾಕಲಬ್ಬಿ ಇನ್ನೂ ಅನೇಕ ನಿವೃತ್ತ ನೌಕರರು ಉಪಸ್ಥಿತರಿದ್ದರು.