ಧಾರವಾಡ: ನಗರದ ಎನ್ಟಿಟಿಎಫ್ ಬಳಿ ವಾಹನಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಕಾರುಗಳು ಸೇರಿದಂತೆ ಐದು ವಾಹನಗಳು ಜಖಂಗೊಂಡಿವೆ.
ಎನ್ಟಿಟಿಎಫ್ ಬಳಿ ಟೆಂಪೊವೊಂದು ಏಕಾಏಕಿ ಬ್ರೇಕ್ ಹಾಕಿ ನಿಲ್ಲಿಸಿದ ಕಾರಣ ಹಿಂದಿನಿಂದ ಬಂದ ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿವೆ. ಇದರಿಂದ ಐದು ವಾಹನಗಳು ಜಖ್ಯಂಗೊಂಡಿವೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಈ ಸರಣಿ ಅಪಘಾತ ನಡೆದಿದ್ದರಿಂದ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ದಟ್ಟನೆ ಉಂಟಾಗಿತ್ತು. ಸ್ಥಳಕ್ಕೆ ಧಾರವಾಡ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ವಾಹನ ದಟ್ಟನೆ ನಿಯಂತ್ರಿಸಿದರು.

