ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಶೂನ್ಯವಾಗಿ ಅಭಿವೃದ್ಧಿದ್ದರು ಸಹ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದ್ದಿಲ್ಲದೆ ಆಸ್ತಿ ತೆರಿಗೆಯನ್ನು ಹೆಚ್ಚು ಮಾಡಿ ಆದೇಶ ಹೊರಡಿಸಿ, ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಿದ್ದಾರೆ.

ಕರ್ನಾಟಕ ಮಹಾನಗರ ಪಾಲಿಕೆ ಅಧಿನಿಯಮಗಳಿಗೆ 2021ರಲ್ಲಿ ಮಾಡಲಾದ ತಿದ್ದುಪಡಿಗೆ ಅನುಗುಣವಾಗಿ, ಆಸ್ತಿ ತೆರಿಗೆ ವಸೂಲಿ ಮಾಡಲು ಹಾಗೂ ಆಸ್ತಿ ತೆರಿಗೆ ದರ ಪರಿಷ್ಕರಣೆಯನ್ನು 2023-24ನೇ ಸಾಲಿಗೆ ಅನ್ವಯವಾಗುವಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಜಾರಿಗೆ ತಂದಿದೆ. ಇದರಿಂದ ಸ್ಥಿರಾಸ್ತಿ ಮಾಲೀಕರಿಗೆ ಹೊರೆಯಾಗಿದೆ.

ಈಗಾಗಲೇ ಆಸ್ತಿ ತೆರಿಗೆ ಪಾವತಿಸಿರುವವರಿಗೂ ಪಾಲಿಕೆ ಬಿಸಿ ಮುಟ್ಟಸಿದೆ. ಈ ಪ್ರಸ್ತಾವನೆ ಕಳೆದ ತಿಂಗಳು 31ರಂದು ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸದ್ದಿಲ್ಲದೆ ಕಾರ್ಪೊರೇಟ್‌ಗಳು ಬಿಲ್ ಪಾಸ್ ಮಾಡಿದ್ದಾರೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸ್ಥಿರಾಸ್ತಿಗಳ ದರ ದುಪ್ಪಟ್ಟು, ಮೂರುಪಟ್ಟು ಹೆಚ್ಚಿದೆ.

ಕ (2)

ಈಗಾಗಲೇ 2023-24ನೇ ಆರ್ಥಿಕ ವರ್ಷ ಮುಗಿದು, 2024-25ನೇ ಆರ್ಥಿಕ ವರ್ಷ ಚಾಲ್ತಿಯಲ್ಲಿದೆ. 2024-25ನೇ ಸಾಲಿನ ಆಸ್ತಿ ತೆರಿಗೆಯನ್ನು ಬಹುತೇಕ ಜನರು ಪಾವತಿಸಿದ್ದಾರೆ. ಹೀಗಿರುವಾಗ, ಆಸ್ತಿ ತೆರಿಗೆ ದರ ಪರಿಷ್ಕರಣೆಯನ್ನು 2023-24ನೇ ಸಾಲಿಗೆ ಅನ್ವಯವಾಗುವಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಜಾರಿಗೆ ತಂದಿದೆ. ಇದರಿಂದ ಸ್ಥಿರಾಸ್ತಿಗಳ ಮಾಲೀಕರಿಗೆ ದೊಡ್ಡ ಹೊರೆ ಬಿದ್ದಿದೆ.

ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ 3.39 ಲಕ್ಷ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಒಳಪಟ್ಟಿವೆ. ಇದರಲ್ಲಿ 1.24 ಲಕ್ಷ ಖಾಲಿ ಜಾಗಗಳು, 1.80 ಲಕ್ಷ ವಾಸದ ಕಟ್ಟಡಗಳು ಹಾಗೂ 34 ಸಾವಿರ ವಾಣಿಜ್ಯ ಕಟ್ಟಡಗಳಿವೆ. 2023-24ನೇ ಸಾಲಿನಲ್ಲಿ ಆಸ್ತಿ ತೆರಿಗೆ ಮೂಲಕ ದಾಖಲೆಯ 117 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಪ್ರಸಕ್ತ ಸಾಲಿನಲ್ಲಿ ಈಗಾಗಲೇ 70 ಕೋಟಿ ರೂಪಾಯಿ ದಾಟಿದೆ.‌

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ತೆರಿಗೆ ಹೆಚ್ಚಿಸಿ ಸದ್ದಿಲ್ಲದೆ ಜನರಿಗೆ ಗುದ್ದಿದೆ. ಅವಳಿ ನಗರ ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದೆ ಉಳಿದಿದೆ. ಮೊದಲು ಜನರಿಗೆ ಮೂಲಭೂತ ಸೌಕರ್ಯ ನೀಡಿ ಆಮೇಲೆ ತೆರಿಗೆ ಹೆಚ್ಚಿಸಬೇಕಿದೆ ಎಂದು ಹುಬ್ಬಳ್ಳಿ ಧಾರವಾಡ ಜನರ ಅಭಿಪ್ರಾಯ.