ಹುಬ್ಬಳ್ಳಿ: ನೇಹಾ ಹಿರೇಮಠ ಅವರ ತಂದೆ ಕಾರ್ಪೊರೇಟರ್ ನಿರಂಜನ ಹಿರೇಮಠ ಅವರನ್ನು ಕುಡಿದ ಮತ್ತಿನಲ್ಲಿ ಆಟೋ ಚಾಲಕನೊಬ್ಬ ಸತಾಯಿಸಿದ್ದಾನೆ.

ಆಟೋ ಚಾಲಕ ದಾರಿ ಬಿಡದೇ ಇದ್ದಾಗ ಪಕ್ಕಕ್ಕೆ ಸೈಡ್‌ಗೆ ತೆಗೆದುಕೊಂಡು ಹೋಗಬೇಕೆಂದರೂ ಆಗಲೂ ಮತ್ತೆ ಕಾರಿಗೆ ಆಟೋ ಚಾಲಕ ಆಟೋ ತಿರುಗಿಸಿದ್ದನಂತೆ. ಹೀಗೆ ದಾರಿಯುದ್ದಕ್ಕೂ ಮಾಡಿಕೊಂಡು ಬಂದಿದ್ದಾನೆ.

ಟೆಂಡರ್ ಶೂರ್ ರಸ್ತೆಯ ಸಿದ್ದೇಶ್ವರ ಪಾರ್ಕ್‌ ಹತ್ತಿರ ನಿರಂಜನ್ ಹಿರೇಮಠ ತಮ್ಮ ಕಾರ್‌ನಲ್ಲಿ ಹೊರಟಿದ್ದಾಗ ಆಟೋ ಚಾಲಕ ದಾರಿ ಬಿಟ್ಟಿಲ್ಲ. ರಸ್ತೆ ತುಂಬಾ ಬೇಕಾಬಿಟ್ಟಿ ಆಟೋ ಓಡಿಸಿಕೊಂಡು ಬರುತ್ತಿದ್ದುದನ್ನು ಕಂಡ ಸಾರ್ವಜನಿಕರು ಆಟೋ ಚಾಲಕನನ್ನು ಹಿಡಿದಿದ್ದಾರೆ. ನಂತರ ಪೊಲೀಸರು ಬಂದು ಆಟೋ ಚಾಲಕನಿ ಸರಿಯಾಗಿ ಬುದ್ದಿ ಕಲಿಸಿದ್ದಾರೆ.