ಹುಬ್ಬಳ್ಳಿ : ಪೌರಕಾರ್ಮಿಕರ ಸಂಘದ ವಿವಿಧ ಹಕ್ಕೊತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ 3 ನೇ ದಿನದ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಆಮರಣ ಉಪವಾಸ ಹೋರಾಟ ಅರೆಬೆತ್ತಲೆಯಾಗಿ ಹೋರಾಟ ಮಾಡಿದರು.
ಸರ್ಕಾರದ ಹಾಗೂ ಪಾಲಿಕೆಯ ದಲಿತ ವಿರೋಧಿ ನೀತಿಯನ್ನು ಖಂಡಿಸಿ ಪೌರಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ಆದೇಶಗಳು ಜಿಲ್ಲಾಧಿಕಾರಿಗಳ ಆದೇಶಗಳು ಹಾಗೂ ಅನೇಕ ನಿರ್ದೇಶನಗಳು, ರಾಷ್ಟ್ರೀಯ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಆದೇಶವನ್ನು ಕೈಗೊಳ್ಳದೆ ಹೋದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

