ಹುಬ್ಬಳ್ಳಿ: ಕಲಘಟಗಿ ಪೊಲೀಸರು ಮದ್ಯ ಕುಡಿದು ನೇಣಿಗೆ ಶರಣಾಗಲು ಮುಂದಾಗಿದ್ದ ವ್ಯಕ್ತಿಯನ್ನು ಸಮಯಕ್ಕೆ ಸರಿಯಾಗಿ ಬಂದು ರಕ್ಷಣೆ ಮಾಡಿದ ಘಟನೆ ಕಲಘಟಗಿ ತಾಲೂಕಿನ ನೆಲ್ಲಿಹರವಿ ಗ್ರಾಮದಲ್ಲಿಂದು ನಡೆದಿದೆ.

46 ವರ್ಷದ ಶಂಭುಲಿಂಗಯ್ಯ ಹುಲಸೋಗಿ ಕುಡಿದ ಮತ್ತಿನಲ್ಲಿ ನೇಣು ಹಾಕಿಕೊಂಡಿದ್ದನು. ಡಿ.ಆರ್‌ ಸಂಗನಗೌಡ ಗಣೇಶ ಹೆಂಬ್ಲಿ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಹೊಗಿ ಶಂಭುಲಿಂಗಯ್ಯ ಹುಲಸೋಗಿ ಎಂಬಾತನನ್ನು ರಕ್ಷಣೆ ಮಾಡಿ ಎಲ್ಲರ ಮನ ಗೆದ್ದಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಕಲಘಟಗಿ ಠಾಣೆ ಇನ್ಸ್‌ಪೆಕ್ಟ‌ರ್ ಪ್ರೈಶೈಲ್‌ ಹಾಗೂ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.