Bengaluru 22°C
Ad

ಗೋರಕ್ಷಣೆ ಮಾಡಲು ಹೋದ ಬಜರಂಗದಳ ಕಾರ್ಯಕರ್ತನ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ

Muslim Boys

ಧಾರವಾಡ: ಬಜರಂಗದಳ ಕಾರ್ಯಕರ್ತನ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ ಆರೋಪ ಕೇಳಿಬಂದಿದ್ದು, ಹಲ್ಲೆ ಖಂಡಿಸಿ ಧಾರವಾಡ ಉಪನಗರ ಪೊಲೀಸ್‌ ಠಾಣೆಗೆ ಹಿಂದೂಪರ ಸಂಘಟನೆಗಳಿಂದ ಮುತ್ತಿಗೆಗೆ ಯತ್ನಿಸಲಾಗಿದೆ.

ಗೋರಕ್ಷಣೆ ಮಾಡಲು ಹೋದಾಗ ಪ್ರಾಣಿ ರಕ್ಷಕ ಹಾಗೂ ಉರಗ ರಕ್ಷಕನೂ ಆಗಿರುವ ಸೋಮಶೇಖರ ಚೆನ್ನಶೆಟ್ಟಿ ಎಂಬುವವರ ಮೇಲೆ ಧಾರವಾಡ ನಗರದ ಹಳೇ ಎಪಿಎಂಸಿ ಬಳಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಠಾಣೆಯ ಮುಂದೆ ಕುಳಿತು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದ್ದಾರೆ.

 

Ad
Ad
Nk Channel Final 21 09 2023
Ad