ಹುಬ್ಬಳ್ಳಿ : ಕನ್ನಡದ ಹೆಮ್ಮೆಯ ಪುತ್ರಿ ಅಪರ್ಣಾ ಅವರಿಗೆ ಭಾವಪೂರ್ವ ಶ್ರದ್ದಾಂಜಲಿಯನ್ನು ನಗರದ ಚೆನ್ನಮ್ಮನ ವೃತ್ತದಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯಾ ಮಠಪತಿ ನೇತೃತ್ವದಲ್ಲಿ ಸಲ್ಲಿಸಲಾಯಿತು.
ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು. ಶೇಖರಯ್ಯ ಮಠಪತಿ, ಮಂಜುನಾಥ ಯಗಂಬಳಿಮಠ ,ರಾಜೇಶ್ ಬಿಜ್ವಾಡ, ಮಹಾವೀರ್ ಬುಲನ, ಮುರಳಿ ಇಂಗಳಹಳ್ಳಿ, ಗುರು ಬೆಟಿಗೇರಿ, ದಾವಲ್ ಸಾಬ್ , ಕೊರಟ್ಟಿ ಹಾಗೂ ಕನ್ನಡ ಅಭಿಮಾನಿಗಳು ಭಾಗಿಯಾಗಿದ್ದರು.
ಕಿರುತೆರೆಯಲ್ಲಿ ಮೂಡಲಮನೆ, ಮುಕ್ತ ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಅಪರ್ಣಾ, 2013 ರಲ್ಲಿ ಬಿಗ್ಬಾಸ್ ಕನ್ನಡದ ಮೊದಲ ಸೀಸನ್ನಲ್ಲಿ ಭಾಗವಹಿಸಿದ್ದರು. 2015ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರ ಮಾಡಿ ಕನ್ನಡ ಕಲಾಪ್ರಿಯರ ಮನಗೆದ್ದಿದ್ದರು.

