ಧಾರವಾಡ: ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗಾಗಿ ಧಾರವಾಡಕ್ಕೆ ಬಂದಿದ್ದ ಯುವಕನೋರ್ವ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ಯಾದಗಿರಿ ಜಿಲ್ಲೆಯ ಸುರಪುರದ ಮೂಲದ ಮಾರುತಿ (25) ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ಸ್ಪರ್ಧಾತ್ಮಕ ಪರೀಕ್ಷೆ ಕುರಿತು ತರಬೇತಿ ಪಡೆಯಲು ಮಾರುತಿ ಧಾರವಾಡಕ್ಕೆ ಬಂದಿದ್ದ. ಕಳೆದ ಮೂರು ವರ್ಷದಿಂದ ಧಾರವಾಡದಲ್ಲೇ ಇದ್ದು ತರಬೇತಿ ಪಡೆಯುತ್ತಿದ್ದ.

ಧಾರವಾಡದಲ್ಲೇ ರೂಮ್ ಮಾಡಿಕೊಂಡು ವಾಸವಿದ್ದ ಮಾರುತಿಗೆ ಮಂಗಳವಾರ ರಾತ್ರಿ ರೂಮ್‌ನಲ್ಲೇ ಹೃದಯಾಘಾತವಾಗಿದೆ. ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.