ನವಲಗುಂದ: ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 824 ಪ್ರಕರಣಗಳನ್ನು ಇತ್ಯರ್ಥವಾಗಿವೆ. ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಸಿವಿಲ್ ವ್ಯಾಜ್ಯಗಳು, ಮತ್ತು ಕೌಟುಂಬಿಕ ವ್ಯಾಜ್ಯಗಳನ್ನೊಳಗೊಂಡು ಇತರೆ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ಇದೊಂದು ಸುವರ್ಣ ಅವಕಾಶವಾಗಿದೆ ಎಂದು ದಿವಾಣಿ ನ್ಯಾಯಾಧೀಶರಾದ ನವೀನ ಡಿಸೋಜಾ ಹೇಳಿದರು.

ಅವರು ರಾಷ್ಟ್ರೀಯ ಲೋಕ ಆದಾಲತ್‌ನಲ್ಲಿ ಸಾರ್ವಜನಿಕರ ಪ್ರಕರಣಗಳ ಇತ್ಯರ್ಥ ಪಡಿಸಿ ಮಾತನಾಡಿದರು. ವಿವಾದವು ಮನಸ್ಸಿನಲ್ಲಿ ಪ್ರಾರಂಭವಾಗುತ್ತದೆ ಮತ್ತು ಅದು ಮನಸ್ಸನ್ನು ಕೆಡಿಸುತ್ತದೆ. ಭಿನ್ನಾಭಿಪ್ರಾಯ ಬಿಟ್ಟು ಪ್ರೀತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರೆ ಮತ್ತು ಸ್ವಲ್ಪ ತ್ಯಾಗ ಮಾಡಿದರೆ 90% ಕುಟುಂಬ ವಿವಾದಗಳು ಕೊನೆಗೊಳ್ಳುತ್ತವೆ.

ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 51 ಸಿವಿಲ್ ಪ್ರಕರಣ, 4 ದರಖಾಸ್ತ ಪ್ರಕರಣ, 15 ಚೆಕ್ ಬೌನ್ಸ ಪ್ರಕರಣ, 07 ಬ್ಯಾಂಕಿನ ವಸೂಲಾತಿ ಪ್ರಕರಣ, 02 ರಾಜಿ ಆಗಬಹುದಾದ ಕ್ರಿಮಿನಲ್ ಪ್ರಕರಣ, 31 ಜನನ ದಾಖಲಾತಿ ಪ್ರಕರಣ, 7 ಕೌಟುಂಬಿಕ ವಿವಾದಗಳು, 677 ಕಿರುಕುಳ ಇತರೆ ಚಿಕ್ಕ ಪುಟ್ಟ ಪ್ರಕರಣಗಳು ಸೇರಿ ಒಟ್ಟು 824 ಪ್ರಕರಣಗಳನ್ನು ಇತ್ಯರ್ಥವಾಗಿವೆ ಎಂದು ಹೇಳಿದರು.