ಮೈಸೂರಿನಿಂದ ಧರ್ಮಸ್ಥಳಕ್ಕೆ ಬಸ್ ಗಳ ಮೂಲಕ ಕೈ ಶಾಸಕ ಹರೀಶ್ ಗೌಡ ಧರ್ಮ ಯಾತ್ರೆ ಹೊರಟಿದ್ದಾರೆ. ಕೋಟೆ ಆಂಜನೇಯ ಸ್ವಾಮಿ ದೇವಾಲಯ ಮುಂಬಾಗ ಧರ್ಮಸ್ಥಳ ಯಾತ್ರೆಗೆ ಶಾಸಕ ಹರೀಶ್ ಗೌಡ ಚಾಲನೆ ಕೊಟ್ಟರು. ಶಾಸಕ ಹರೀಶ್ ಗೌಡ ಗೆ ಶಾಸಕ ತನ್ವೀರ್ ಸೇಠ್, ಬಿಜೆ ವಿಜಯ್ ಕುಮಾರ್, ಮೂರ್ತಿ ಸಾಥ್ ಕೊಟ್ಟರು.
ಧರ್ಮಸ್ಥಳದ ವಿಜಯ ಯಾತ್ರೆ ಎಂದು ಘೋಷಣೆ ಕೂಗಲಾಯಿತು. 30 ಬಸ್ ಗಳ ಮೂಲಕ ಧರ್ಮಸ್ಥಳಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಹೊರಟರು. ಧರ್ಮಸ್ಥಳ ವಿಚಾರದಲ್ಲಿ ಷಡ್ಯಂತರ ಆಗ್ತಿದೆ ಎಂದು ಕೈ ನಾಯಕನಿಂದ ಧರ್ಮಸ್ಥಳ ಯಾತ್ರೆ ಹೊರಡಲಾಯಿತು.
ವಿಪಕ್ಷಗಳದ್ದು ಧರ್ಮಯಾತ್ರೆ ಅಲ್ಲ ರಾಜಕೀಯ ಯಾತ್ರೆ ಸಿಎಂ ಹೇಳಿಕೆಯ ಬೆನ್ನಲ್ಲೇ ಕೈ ಶಾಸಕನಿಂದ ಧರ್ಮಸ್ಥಳ ಯಾತ್ರೆ ನಡೆಸಲಾಯಿತು. ಧರ್ಮಸ್ಥಳ ತಲುಪಿ ಸ್ವಾಮಿ ದರ್ಶನ ಪಡೆದು ವೀರೇಂದ್ರ ಹೆಗ್ಗಡೆ ಅವರನ್ನ ಕಾಂಗ್ರೆಸ್ ಶಾಸಕ ಹರೀಶ್ ಗೌಡ ಮತ್ತು ಮುಖಂಡರು ಭೇಟಿಯಾಗಲಿದ್ದಾರೆ.

