ಚಿತ್ರದುರ್ಗ: ಮಳೆ ನಡುವೆ ಬೃಹತ್ ಗಾತ್ರದ ಆಲಿಕಲ್ಲು ಧರೆಗೆ ಬಿದ್ದ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ರಾಮಸಾಗರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತನೋರ್ವನ ಜಮೀನಿನಲ್ಲಿ ಬೃಹತ್ ಗಾತ್ರದ ಆಲಿಕಲ್ಲು ಬಿದ್ದಿದೆ. ಬೃಹತ್ ಗಾತ್ರದ ಆಲಿಕಲ್ಲು ಕಂಡು ಬಾಲಕ ಸಂತಸ ವ್ಯಕ್ತಪಡಿಸಿದ್ದಾನೆ. ದಾಳಿಂಬೆ ತೋಟದ ಹಲವು ಕಡೆ ಆಲಿಕಲ್ಲು ಬಿದ್ದಿದೆ. ಬೃಹತ್ ಗಾತ್ರದ ಆಲಿಕಲ್ಲು ಕೈನಲ್ಲಿ ಹಿಡಿದು ಬಾಲಕ ಎಂಜಾಯ್ ಮಾಡಿದ್ದಾನೆ.

