ಚಿತ್ರದುರ್ಗ : ಕೋಟೆ ವೀಕ್ಷಣೆಗೆ ತೆರಳಿದ್ದ ಪ್ರವಾಸಿಗನ ಮೇಲೆ ಮುಶ್ಯಾ ದಾಳಿ ಮಾಡಿದೆ. ಪ್ರವಾಸಿಗನ ತಲೆಗೆ ಬಲವಾಗಿ ಕಪ್ಪು ಮುಶ್ಯಾ ಕಚ್ಚಿದ ಘಟನೆ ಚಿತ್ರದುರ್ಗದ ಏಳಿ ಸುತ್ತಿನ ಕೋಟೆಯ ಉಯ್ಯಾಲೆ ಕಂಬದ ಬಳಿ ನಡೆದಿದೆ.
ಚಿತ್ರದುರ್ಗ ತಾಲೂಕಿನ ಸಿದ್ಧಾಪುರದ ಕಾರ್ತಿಕ್ ಗಾಯಾಳು ಎಂದು ತಿಳಿದು ಬಂದಿದೆ. ಪ್ರವಾಸಿ ಮಿತ್ರ ತಂಡದಿಂದ ಗಾಯಾಳು ಕಾರ್ತಿಕ್ ನನ್ನು ರಕ್ಷಣೆ ಮಾಡಲಾಗಿದೆ. ಗಾಯಾಳುವನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

