ಚಿಕ್ಕಬಳ್ಳಾಪುರ : ಕೃಷಿ ಹೊಂಡದ ಬಳಿ ಮೋಟಾರ್ ಪಂಪ್ಸೆಟ್ ರಿಪೇರಿ ಮಾಡಲು ತೆರಳಿದ್ದ ಮೂವರು ಕರೆಂಟ್ ಶಾಕ್‌ಗೆ ಸಿಲುಕಿ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿಯ ಮುಂತಕೆದಿರೇನಹಳ್ಳಿಯಲ್ಲಿ ನಡೆದಿದೆ.
ಶ್ರೀಕಾಂತ್ (25) ಲೋಕೇಶ್ (28) ಮತ್ತು ರಮೇಶ್ (24) ಮೃತಪಟ್ಟ ದುರ್ದೈವಿಗಳು. ಇಂದು ಸಂಜೆ ತಮ್ಮ ಜಮೀನಿನ ಕೃಷಿ ಹೊಂಡದಲ್ಲಿ ನೀರು ಎತ್ತಲು ಅಳವಡಿಸಲಾಗಿದ್ದ ಮೋಟಾರ್ ಪಂಪ್ಸೆಟ್ ರಿಪೇರಿ ಗೆಂದು ಶ್ರೀಕಾಂತ್ ನೀರಿಗಿಳಿದಿದ್ದಾರೆ.
ಇವರ ಜೊತೆ ಲೋಕೇಶ್ ಹಾಗೂ ರಮೇಶ್ ಕೂಡ ಕೃಷಿ ಹೊಂಡಕ್ಕಿಳಿದು ಮೋಟಾರ್ ರಿಪೇರಿಗೆ ಕೈಜೋಡಿಸಿದ್ದಾರೆ. ಆದರೆ ಇದ್ದಕ್ಕಿದ್ದಂತೆ ವಿದ್ಯುತ್ ಪ್ರವಹಿಸಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು ಚಿಂತಾಮಣಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

