ಚಿಕ್ಕಬಳ್ಳಾಪುರ: ಸಾಮಾನ್ಯವಾಗಿ ಕೃಷಿ ತೋಟಗಳಲ್ಲಿ, ಗದ್ದೆಗಳಲ್ಲಿ ಬೆರ್ಚಪ್ಪ, ಬಿದುರು ಗೊಂಬೆಯನ್ನು ಇಡುತ್ತಾರೆ. ದೃಷ್ಟಿಯಾಗುತ್ತದೆ ಎಂಬ ನಂಬಿಕೆ ಆಧಾರದ ಮೇಲೆ ಮತ್ತು ಪ್ರಾಣಿ, ಪಕ್ಷಿಗಳು ಈ ಕಲಾಕೃತಿಯನ್ನು ಮನುಷ್ಯನೆಂದು ತಿಳಿದು ಹತ್ತಿರ ಸುಳಿಯದಂತಿರಲು ಈ ಪ್ಲಾನ್​ ಮಾಡುತ್ತಾರೆ. ಆದರೆ ಇಲ್ಲೊಬ್ಬ ರೈತ ತೋಟಕ್ಕೆ ದೃಷ್ಟಿಯಾಗುತ್ತೆ ಎಂದು ನಟಿ ರಚಿತಾ ರಾಮ್ ಫೋಟೋವನ್ನು ಹಾಕಿದ್ದಾನೆ.

ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಗ್ರಾಮದ ರೈತ ದೀಪಕ್ ಟೊಮ್ಯಾಟೋ ತೋಟಕ್ಕೆ ದೃಷ್ಟಿಯಾಗದಂತೆ ನಟಿ ರಚಿತಾ ರಾಮ್ ಮಾತ್ರವಲ್ಲದೆ, ಸನ್ನಿ ಲಿಯೋನ್ ಫೋಟೋ ಹಾಕಿದ್ದಾನೆ. ದೃಷ್ಟಿ ಬೊಂಬೆ ಬದಲು ನಟಿಯರ ಫೋಟೋ ಬಳಸಿ ವಿನೂತನ ಪ್ರಯೋಗ ಮಾಡಿದ್ದಾನೆ. ಸದ್ಯ ಟೊಮ್ಯಾಟೋ ಬೆಲೆ 4 ಸಾವಿರದಿಂದ 5 ಸಾವಿರ ರೂಪಾಯಿ ಗಡಿ ದಾಟಿದೆ. ಒಳ್ಳೆಯ ಫಸಲು ಬರುವ ನೀರೀಕ್ಷೆಯಲ್ಲಿದೆ.