ಗುಂಡ್ಲುಪೇಟೆ : ತಾಲೂಕಿನ ಭೀಮನಬೀಡು ಗ್ರಾಮದಿಂದ ಸುಮಾರು 300 ಕ್ಕೂ ಅಧಿಕ ಯುವಕರು, ಮಹಿಳೆಯರ ತಂಡ ಮಹದೇಶ್ವರ ಬೆಟ್ಟಕ್ಕೆ ಬರಿಗಾಲಿನಲ್ಲಿ ಶನಿವಾರ ಪಾದಯಾತ್ರೆ ಆರಂಭಿಸಿದರು.

ತಾಲೂಕಿನ ಭೀಮನಬೀಡು ಗ್ರಾಮದ  ದೇವಸ್ಥಾನಲ್ಲಿ ಈಡುಗಾಯಿ ಒಡೆದು ಪೂಜೆ ಸಲ್ಲಿಸಿದ ಮಲೆ ಮಹದೇಶ್ವರ ಪಾದಯಾತ್ರೆ ತಂಡವು ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸಿ ಶಂಖನಾದ, ಜಾಗಟೆ ಬಾರಿಸುವ ಜೊತೆಗೆ ಜಯ ಘೋಷ ಕೂಗುತ್ತ ಪಾದಯಾತ್ರೆ ಪ್ರಾರಂಭಿಸಿದರು.

ಕಳೆದ 7 ವರ್ಷಗಳಿಂದ ಬರಿಗಾಲು ಯಾತ್ರೆ ನಡೆಸುತ್ತಿದ್ದು ಮಲೆ ಮಹದೇಶ್ವರ ಬೆಟ್ಟದಲ್ಲಿ 3 ನೇ ವರ್ಷ ಅನ್ನದಾನ ಏರ್ಪಡಿಸಲಾಗುತ್ತಿದೆ‌, ಗುಂಡ್ಲುಪೇಟೆ ತಾಲೂಕಿಗೆ ಉತ್ತಮ ಮಳೆ- ಬೆಳೆ ಬಂದು ಆರೋಗ್ಯ ಕೊಟ್ಟು ಕಾಪಾಡಲೆಂದು ಈ ಯಾತ್ರೆ ನಡೆಸಲಾಗುತ್ತಿದೆ ಎಂದು ಯಾತ್ರಾರ್ಥಿಗಳು ತಿಳಿಸಿದರು.