ಚಾಮರಾಜನಗರ : ಗ್ರಾಮದಲ್ಲಿ ಅಕ್ರಮ, ಅನೈತಿಕ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಗ್ರಾಮಸ್ಥರು ಮುಂದಾಗಿದ್ದಾರೆ. ಗ್ರಾಮದಲ್ಲಿ ಅಕ್ರಮ ಚಟುವಟಿಕೆ ತಡೆಯಲು ಕಟ್ಟಾಜ್ಞೆಯನ್ನು ಯಜಮಾನರು ಹೊರಡಿಸಿದ್ದಾರೆ.

ಅಕ್ರಮ ಮದ್ಯ ಮಾರಾಟ, ಜೂಜಾಟದಂತಹ ಅನೈತಿಕ ಚಟುವಟಿಕೆಗೆ ಭಾರಿ ದಂಡದ ಎಚ್ಚರಿಕೆ ನೀಡಲಾಗಿದೆ. ಅಕ್ರಮ ಅನೈತಿಕ ಚಟುವಟಿಕೆಗಳ ಮಾಡಿದ್ರೆ ಭಾರಿ ದಂಡ ಕಟ್ಟಬೇಕಾಗುತ್ತದೆ ಎಂದು ಗ್ರಾಮದ ಜನರಿಗೆ ಎಚ್ಚರಿಕೆ ನೀಡಲಾಯಿತು.

ಕಾನೂನು ಕೈಗೆತ್ತಿಕೊಂಡು ಕ್ರಮಕ್ಕೆ ಯಜಮಾನರು ಮುಂದಾಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಅಣ್ಣೂರು ಕೇರಿಯ ಗ್ರಾಮಸ್ಥರಿಗೆ ಗ್ರಾಮದ ಯಜಮಾನರಿಂದ ಕಟ್ಟಾಜ್ಞೆ ವಿಧಿಸಲಾಗಿದೆ.

ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡಿದರೆ 50 ಸಾವಿರ ದಂಡ, ಜೂಜಾಟವಾಡಿದರೆ 50 ಸಾವಿರ ದಂಡ, ಅನಧಿಕೃತ ವ್ಯಕ್ತಿ ಪ್ರವೇಶ ಮಾಡಿದರೆ 1 ಲಕ್ಷ ದಂಡ, ಸಾಕ್ಷ್ಯಾಧಾರಗಳ ಒದಗಿಸಿದರೆ 10 ಸಾವಿರ ಬಹುಮಾನ ಘೋಷಣೆ. ಗ್ರಾಮದ ಉಪ್ಪಾರ ಸಮುದಾಯದ ಯಜಮಾನರು ಸಭೆ ಮೂಲಕ ಕಟ್ಟಾಜ್ಞೆ ನೀಡಲಾಗಿದೆ.