ಗುಂಡ್ಲುಪೇಟೆ : ಹುಲಿಯನ್ನ ಸೆರೆಹಿಡಿಯಲು ವಿಫಲರಾದ ಅರಣ್ಯ ಇಲಾಖೆ ವಿರುದ್ಧ ರೊಚ್ಚಿಗೆದ್ದ ಬೊಮ್ಮಲಾಪುರ ರೈತರು ಇಲಾಖೆಯ ಸಿಬ್ಬಂದಿಗಳನ್ನೇ ಬೋನಿಗೆ ಕೂಡಿಹಾಕಿರುವ ಘಟನೆ ನಡೆದಿದೆ.

ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಕುಂದಕೆರೆ ವಲಯಕ್ಕೆ ಸೇರಿದ ಬೊಮ್ಮಲಾಪುರ ಸುತ್ತಲಿನ ಗ್ರಾಮಗಳಲ್ಲಿ ಹುಲಿಯ ಉಪಟಳ ಹೆಚ್ಚಿದ್ದು ಜಾನುವಾರುಗಳನ್ನ ಕೊಂದು ಮುಗಿಸಿತ್ತು, ವ್ಯಾಘ್ರನ ಕಾಟದಿಂದ ರೈತರು ಜಮೀನುಗಳಿಗೆ ತೆರಳಲು ಹಿಂದೇಟು ಹಾಕುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು.

ಹುಲಿಯನ್ನ ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ರೈತರು ಮನವಿ ಮಾಡುತ್ತಲೇ ಬಂದಿದ್ದರು ಸಹ ಯಾವುದೇ ಪ್ರಯೋಜನವಾಗಿರಲಿಲ್ಲ ನಾಮಾಕವಸ್ಥೆಗೆ ಗಂಗಾದರಪ್ಪ ಎಂಬವರ ಜಮೀನಿನಲ್ಲಿ ಬೋನ್ ಇರಿಸಿ ಕೈ ತೊಳೆದುಕೊಂಡಿದ್ದ ಅರಣ್ಯ ಇಲಾಖೆ ರೈತರ ಕೆಂಗಣ್ಣಿಗೆ ಗುರಿಯಾಗಿದ್ದರ ಪರಿಣಾಮ ಬೋನಿಗೆ ಸೆರೆಯಾಗಬೇಕಾಯಿತು. ಸದ್ಯ ಸಿಬ್ಬಂದಿಗಳನ್ನ ಬಂದಿ ಮಾಡಿರುವ ರೈತರು ಮೇಲಾಧಿಕಾರಿಗಳು ಬರುವಂತೆ ಪಟ್ಟುಹಿಡಿದಿದ್ದಾರೆ.