ಚಾಮರಾಜನಗರ: ಧರ್ಮ ಬಯಲಾಗಿ ಮಠ ತೊರೆದಿದ್ದ ಸ್ವಾಮೀಜಿ ಕೇಸ್, ಮಠದ ಸ್ವಾಮೀಜಿಯಾಗಿದ್ದ ನಿಸಾರ್ ಅಹಮದ್ ನ ಸಲಿಂಗ ಕಾಮ ವೀಡಿಯೋ ವೈರಲ್ ಆಗಿದೆ. ಲಿಂಗಾಯತ ಮಠದ ಗುರುವಾಗಿ ಮುಸ್ಲಿಂ ಟೋಪಿ ಆರ್ಡರ್ ಮಾಡಿದ್ದು ಕೂಡ ಬೆಳಕಿಗೆ ಬಂದಿದೆ.

ಧರ್ಮ ಬಯಲಾಗಿ ಮಠ ತೊರೆದಿದ್ದ ಯುವ ಸನ್ಯಾಸಿ ನಿಜಲಿಂಗಸ್ವಾಮೀಜಿ @ ಮಹಮ್ಮದ್ ನಿಸಾರ್ ನ ವೀಡಿಯೋ ವೈರಲ್ ಆಗಿದ್ದು, ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದ ಗುರು ಮಲ್ಲೇಶ್ವರ ಮಠದ ಸ್ವಾಮೀಜಿಯಾಗಿದ್ದ ನಿಜಲಿಂಗಸ್ವಾಮೀಜಿ ಮಠದ ವಿಳಾಸಕ್ಕೆ ಮುಸ್ಲಿಂ ಟೋಪಿ ಬಂದಿದ್ದಕ್ಕೆ  ಭಕ್ತರು ಹೌಹಾರಿದರು.

ಇದೀಗ ಆತನ ಸಲಿಂಗ ಕಾಮ ವೀಡಿಯೋ ಕೂಡ ವೈರಲ್ ಆಗಿದೆ. ಬಸವ ತತ್ವಕ್ಕೆ ಆಕರ್ಷಿತರಾಗಿ 2021 ರಲ್ಲಿ ಲಿಂಗ ದೀಕ್ಷೆಯನ್ನು  ಯಾದಗಿರಿಯ ಮಹಮ್ಮದ್ ನಿಸಾರ್ ಪಡೆದಿದ್ದರು. ಸನ್ಯಾಸತ್ವ ಸ್ವೀಕರಿಸಿ ನಿಜಲಿಂಗ ಸ್ವಾಮೀಜಿಯಾಗಿದ್ದ ಮಹಮ್ಮದ್ ನಿಸಾರ್ ಕಳೆದ ಒಂದೂವರೆ ತಿಂಗಳಿನಿಂದ ಚೌಡಹಳ್ಳಿ ಮಠದ ಗುರುವಾಗಿ ಪ್ರವಚನ ಪಡೆದಿದ್ದರು.

4 ದಿನದ ಹಿಂದೆ ಪೂರ್ವಶ್ರಾಮದ ಧರ್ಮ ಬಯಲಾಗಿ ಹಲವರು ಆಕ್ಷೇಪಿಸಿದ್ದರಿಂದ ಮಠ ತೊರೆದಿದ್ದ ನಿಜಲಿಂಗ ಸ್ವಾಮೀಜಿ. ಲಿಂಗಾಯತ ಮಠಕ್ಕೆ ಗುರುವಾಗಿ ಬಂದು ಮುಸ್ಲಿಂ ಟೋಪಿ ಆರ್ಡರ್ ಮಾಡಿದ್ದಕ್ಕೆ  ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹಲವರಿಂದ ನಿಜಲಿಂಗಸ್ವಾಮಿ ವಿರುದ್ಧ ಕಿಡಿಕಾರಿದರು. ಲಿಂಗಾಯತ ದೀಕ್ಷೆ ಪಡೆದ ಬಳಿಕವು ಪೂರ್ವಾಶ್ರಮದ ಧರ್ಮ ಬಿಟ್ಟಿರಲಿಲ್ಲವೇ ಎಂಬ ಟೀಕೆ ವ್ಯಕ್ತವಾಗಿದೆ.