ಗುಂಡ್ಲುಪೇಟೆ : ಕ್ರಷರ್ ನಲ್ಲಿ ಕೆಲಸಕ್ಕಾಗಿ ಬಾಲಕಾರ್ಮಿಕರನ್ನ ನೇಮಕ ಮಾಡಿಕೊಳ್ಳುವ ಮೂಲಕ ಬಾಲಕಾರ್ಮಿಕ ಕಾಯ್ದೆಯನ್ನ ಉಲ್ಲಂಘನೆ ಮಾಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ನಡೆದಿದೆ.

ಗುಂಡ್ಲುಪೇಟೆ ತಾಲೂಕಿನ ಬೇಗೂರಿನ ಎಸ್ ಎಲ್ ವಿ ಸ್ಟೋನ್ ಕ್ರಷರ್ ನಲ್ಲಿ ಬಾಲ ಕಾರ್ಮಿಕರಿರುವ ಕುರಿತಂತೆ ಖಚಿತ ಮಾಹಿತಿಯನ್ನರಿತ ತಹಸೀಲ್ದಾರ್ ತನ್ಮಯ್ ಪೊಲೀಸ್ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳೊಟ್ಟಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದ ವೇಳೆ ಐದು  ಮಂದಿ ಬಾಲ ಕಾರ್ಮಿಕರಿರುವುದು ಖಾತ್ರಿಯಾಗಿದೆ.

ಎಸ್ ಎಲ್ ವಿ ಸ್ಟೋನ್ ಕ್ರಷರ್ ನಲ್ಲಿ  ಕೆಲಸ ಮಾಡುತ್ತಿರೋ ಹದಿನೈದು ಜನರ ಪೈಕಿ ಐದು ಮಂದಿ ಬಾಲಕಾರ್ಮಿಕರಿರುವುದು ಕಂಡುಬಂದಿದೆ, ಸದ್ಯ ಬಾಲ ಕಾರ್ಮಿಕರನ್ನ ವಶಕ್ಕೆ ಪಡೆದು ಎಸ್ ಎಲ್ ವಿ ಸ್ಟೋನ್ ಕ್ರಷರ್ ಮಾಲೀಕರ ವಿರುದ್ಧ ಕಾನೂನು ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.