ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಬೋಳಗುಡ್ಡ ವ್ಯಾಪ್ತಿಯ ಕೆರೆಯಲ್ಲಿ ಹುಲಿ ಈಜಾಡುತ್ತ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಪ್ರವಾಸಿಗರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಸಪಾರಿಗೆ ತೆರಳಿದ್ದವರಿಗೆ ಸನಿಹದಲ್ಲೇ ವ್ಯಾಘ್ರನ ದರ್ಶನವಾಗಿದೆ, ಬೋಳಗುಡ್ಡ ಸಮೀಪದ ಕೆರೆಯಲ್ಲಿ ರಿಲ್ಯಾಕ್ಸ್ ಮೂಡ್ಗೆ ಜಾರಿದ್ದ ಹುಲಿಯು ಪ್ರವಾಸಿಗರ ಕ್ಯಾಮರಗೆ ಪೋಸ್ ಕೊಟ್ಟಿದೆ, ಕೆರೆಯಲ್ಲಿ ಮೈಮರೆತು ಈಜಾಡುತ್ತಿದ್ದ ದೃಶ್ಯವನ್ನ ಸೆರೆಹಿಡಿದಿರುವ ಪ್ರವಾಸಿಗರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಸಖತ್ ವೈರಲ್ಲಾಗಿದೆ.

