ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಪ್ರವಾಸಿಗರ ನೆಚ್ಚಿನ ಹುಲಿಯಾಗಿದ್ದ ಮೂರ್ಕೆರೆ ಹೆಣ್ಣು ಹುಲಿ ನಾಪತ್ತೆಯಾಗಿ 20 ದಿನಗಳೇ ಕಳೆದಿವೆ , ನಾಲ್ಕು ಮರಿಗಳೊಟ್ಟಿಗೆ ಪ್ರವಾಸಿಗರಿಗೆ ದರ್ಶನ ನೀಡ್ತಿದ್ದ ನಾಪತ್ತೆಯಾಗಿರುವುದು ಪ್ರವಾಸಿಗರಿಗೆ ಬೇಸರ ತಂದಿದೆ.

ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಹಾರ್ಟ್ ಫೇವರಿಟ್ ಹುಲಿ ಎಂದೇ ಖ್ಯಾತಿಯಾಗಿದ್ದ ಮೂರ್ಕೆರೆ ಹುಲಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದೆ ಕಳೆದ 20 ದಿನಗಳಿಂದ ಸಪಾರಿಯಲ್ಲಿ ಕಾಣಿಸಿಕೊಳ್ಳದೆ ನಿರಾಸೆ ಮೂಡಿಸಿದೆ.

ನಾಲ್ಕು ಮರಿಗಳನ್ನ ತಬ್ಬಲಿ ಮಾಡಿ ಹೋಗಿರುವ ಹುಲಿಗಾಗಿ ಅರಣ್ಯ ಇಲಾಖೆ ತಲಾಶ್ ನಡೆಸುತ್ತಿದೆಯಾದರು ಇನ್ನು ಪತ್ತೆಯಾಗಿಲ್ಲ, ಒಂದೆಡೆ ಮರಿಗಳ ಪೋಷಣೆ ಜವಾಬ್ದಾರಿ ಅರಣ್ಯ ಇಲಾಖೆ ಮೇಲಿದೆ ಇನ್ನೊಂದೆಡೆ ತಾಯಿ ಹುಲಿ ಜಾಡು ಹಿಡಿದು ಹುಡುಕಾಟ ನಡೆಸಲಾಗ್ತಿದೆ, ಹುಲಿ ಪತ್ತೆಗೆ ಕ್ಯಾಮರಾ ಟ್ರಾಪ್ ಅಳವಡಿಸಿ ನಿಗಾವಹಿಸಲಾಗಿದೆ.

ಕಳೆದ ಮೂರು ವಾರಗಳ ಹಿಂದೆ ತಾಯಿ ಹುಲಿ ಕುಂಟುತ್ತಾ ಹೆಜ್ಜೆ ಹಾಕುತ್ತಿರುವ ದೃಶ್ಯವನ್ನ ಪ್ರವಾಸಿಗರೊಬ್ಬರು ಕ್ಯಾಮರಾದಲ್ಲಿ ಸೆರೆಹಿಡಿದಿದ್ದರು ಅದಾದ ಬಳಿಕ ನಾಪತ್ತೆಯಾದ ಹುಲಿ ಇನ್ನೂ ಕಾಣಸಿಕ್ಕಿಲ್ಲವಾದ್ದರಿಂದ ಅರಣ್ಯ ಇಲಾಖೆಗೆ ಚಿಂತೆ ಶುರುವಾಗಿದೆ.