ಚಾಮರಾಜನಗರ : ಮಹದೇಶ್ವರ ಬೆಟ್ಟದಲ್ಲಿ ಹುಲಿ ನೋಡಿ ಪ್ರವಾಸಿಗರು ಫುಲ್ ಖುಷಿಯಾದರು. ಕೆರೆಯಲ್ಲಿ ಈಜಾಡುತ್ತಾ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಹುಲಿ ದರ್ಶನ ಕೊಟ್ಟಿತು.
ಹನೂರು ಬಫರ್ ವಲಯದ ಪಚ್ಚೆ ದೊಡ್ಡಿಗಸ್ತಿನ ಸುಂಕದಕಟ್ಟೆ ಅರಣ್ಯ ಪ್ರದೇಶದ ಉಡುತೊರೆ ಹಳ್ಳದಲ್ಲಿ ಕಾಣಿಸಿಕೊಂಡಿತು. ಸತತವಾಗಿ ಸುರಿದ ಮಳೆಗೆ ಕೆರೆ ಕಟ್ಟೆಗಳು ತುಂಬಿದ್ದವು. ಅಚ್ಚ ಹಸಿರಿನ ನಡುವೆ ಕೆರೆಯಲ್ಲಿ ಹುಲಿ ರಿಲ್ಯಾಕ್ಸ್ ಮಾಡುತ್ತಿತ್ತು. ನೀರಿಗಿಳಿದು ಆಟವಾಡುತ್ತಿದ್ದ ಹುಲಿ ಕಂಡು ಪ್ರವಾಸಿಗರು ಖುಷಿ ಪಟ್ಟರು. ನೀರಿನಲ್ಲಿದ್ದ ದೃಶ್ಯ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದೆ.

