ಗುಂಡ್ಲುಪೇಟೆ : ಪಟ್ಟಣದ ಸಮೀಪದ ಲೇ ಔಟ್ನಲ್ಲಿ ವ್ಯಾಘ್ರನ ಕಂಡ ಸ್ಥಳೀಯರು ಬೆಚ್ಚಿಬಿದ್ದಿರುವ ಘಟನೆ ಗುಂಡ್ಲುಪೇಟೆಯ ನಿಸರ್ಗ ಬಡಾವಣೆಯಲ್ಲಿ ನಡೆದಿದೆ.
ಗುಂಡ್ಲುಪೇಟೆ ಸುಲ್ತಾನ್ ಬತ್ತೇರಿ ರಸ್ತೆಯಲ್ಲಿರುವ ನಿಸರ್ಗ ಲೇ ಔಟ್ನಲ್ಲಿ ವ್ಯಾಘ್ರ ಬಿಂದಾಸಾಗಿ ಸಂಚರಿಸುತ್ತಿರುವ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ರಾತ್ರಿ ಶ್ವಾನಗಳು ಸುಮಾರು ತಾಸುಗಟ್ಟಲೆ ಬೊಗಳುತ್ತಿದ್ದನ್ನ ಗಮನಿಸಿ ಅನುಮಾನಗೊಂಡು ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಹುಲಿಯ ಚಲನವಲನ ಬೆಳಕಿಗೆ ಬಂದಿದೆ, ವ್ಯಾಘ್ರನ ಕಂಡು ಸ್ಥಳೀಯರು ಹೊರಬರಲು ಭಯಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

